ಆರಾಧನಾ ಮಹೋತ್ಸವ 20ರಿಂದ

Hrr16Matha7
Published on

ಹರಿಹರ: ನಗರದ ನದಿ ತೀರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.20ರಿಂದ 22ರ ವರೆಗೆ ಶ್ರೀ ರಾಘವೇಂದ್ರಸ್ವಾಮಿಗಳವರ 353ನೇ ಆರಾಧನಾ ಮಹೋತ್ಸವ ಆಯೋಜಿಸಿದೆ.

ಆ.20ರಂದು ಪೂರ್ವಾಧನೆ ನಿಮಿತ್ತ ಬೆಳಗ್ಗೆ 7ಕ್ಕೆ ಅಷ್ಟೋತ್ತರ ಪಂಚಾಮೃತ ಸೇವಾ ಹಾಗೂ ಅಲಂಕಾರ, 9ಕ್ಕೆ ಪ್ರವಚನ, 10ಕ್ಕೆ ಉಮಾ ಭತ್ ಸಂಗಡಿಗರು, ಮನೋಜವಂ ಭಜನಾ ಮಂಡಳಿಯಿಂದ ಸಂಗೀತವಿದೆ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಹಾಮಂಗಳಾರತಿ ಇದೆ.

21ರಂದು ಮಧ್ಯಾರಾಧನೆ ಬೆಳಗ್ಗೆ 8ಕ್ಕೆ ನಾದಸ್ವರದೊಂದಿಗೆ ಶ್ರೀಮಠದ ಪ್ರಾಂಗಣದಲ್ಲಿ ಫಲ-ಪುಷ್ಪಾದಿಗಳ ಮೆರವಣಿಗೆ ಹಾಗೂ ಶ್ರೀ ಗುರುಗಳಿಗೆ ಫಲ-ಪಂಚಾಮೃತ ಅಭಿಷೇಕ, 9.30ರಿಂದ ರಾಯರ ಕನಕಾಭಿಷೇಕ ಮತ್ತು ತುಲಾಭಾರ, ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ, ಹಾಗೂ ಪವಮಾನ ಹೋಮ, ನಂತರ ಮಹಾಮಂಗಳಾರತಿ, ಸಂಜೆ 6ಕ್ಕೆ ರಾಘವೇಂದ್ರ ಸಮುದಾಯ ಭವನದಲ್ಲಿ ವಿಶೇಷ ದೀಪ ಅಲಂಕಾರ ಸೇವೆ.

ಆ.22ರಂದು ಬೆಳಗ್ಗೆ 9.30ಕ್ಕೆ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, 12ಕ್ಕೆ ಮಹಾರಥೋತ್ಸವ ನಂತರ ಮಹಾಮಂಗಳಾರತಿ ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ಮಹಾಮಂಗಳಾರತಿ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net