ಜಗತ್ತಿನಲ್ಲಿಯೇ ಅರೇಬಿಕ್​ ಭಾಷೆ ಹೆಚ್ಚು ಬಳಕೆ

Arabic language is widely used in the world
ವಿಜಯಪುರದ ಸಿಕ್ಯಾಬ್​ ಬಾಲಕಿಯರ ಪ್ರೌಢಶಾಲೆಯಲ್ಲಿ ವಿಶ್ವ ಅರೇಬಿಕ್​ ಭಾಷಾ ದಿನ ಆಚರಿಸಲಾಯಿತು. ಮೌಲಾನಾ ಮೆಹಬೂಬ ಉರ್​ ರೆಹ್ಮಾನ ಮದನಿ, ಎಸ್​.ಎ. ಕಾಸರ್​, ಎಸ್​.ಕೆ. ಕಟ್ಟಿಮನಿ ಮತ್ತಿತರರಿದ್ದರು.
Published on

ವಿಜಯಪುರ : ಅರೇಬಿಕ್​ ಭಾಷೆ ಜಗತ್ತಿನಲ್ಲಿಯೇ ಹೆಚ್ಚು ಬಳಕೆಯಾಗುವ ಭಾಷೆ ಎಂದು ನಿವೃತ್ತ ಉಪನ್ಯಾಸಕ ಮೌಲಾನಾ ಮೆಹಬೂಬ ಉರ್​ ರೆಹ್ಮಾನ ಮದನಿ ಹೇಳಿದರು.

ನಗರದ ಸಿಕ್ಯಾಬ್​ ಪದವಿ ಪೂರ್ವ ಕಾಲೇಜು ಹಾಗೂ ಸಿಕ್ಯಾಬ್​ ಆಂಗ್ಲ ಮಾಧ್ಯಮ ಬಾಲಕಿಯರ ಪ್ರೌಢಶಾಲೆ ಸಹಯೋಗದಲ್ಲಿ ಇತ್ತಿಚೆಗೆ ಹಮ್ಮಿಕೊಂಡಿದ್ದ ವಿಶ್ವ ಅರೇಬಿಕ್​ ಭಾಷಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅರೇಬಿಕ್​ ಭಾಷೆ ಕಲಿಕೆಯಿಂದ ಕುರಾನ್​ ಓದಲು ಸಹಕಾರಿಯಾಗುತ್ತದೆ. ಜ್ಞಾನ ವೃದ್ಧಿಯಾಗುತ್ತದೆ ಎಂದರು.

ಅರೇಬಿಕ್​ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಅರೇಬಿಕ್​ ವಸ್ತು ಪ್ರದರ್ಶನ, ಭಾಷಣ ಮತ್ತು ಲು ನಾಟಕಗಳನ್ನು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಉಪನ್ಯಾಸಕ ಎಂ.ಎಂ. ಬಾಗವಾನ ನಿರೂಪಿಸಿ ವಂದಿಸಿದರು.

ಡೀನ್​ ಎನ್​.ಎಸ್​. ಭೂಸನೂರ, ಪ್ರಾಚಾಯೆರ್ ಎಸ್​.ಕೆ. ಕಟ್ಟಿಮನಿ, ಮುಖ್ಯಶಿಕ್ಷಕಿ ಎಸ್​.ಎ. ಕಾಸರ್​, ವಿದ್ಯಾರ್ಥಿಗಳು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net