

ಹರಪನಹಳ್ಳಿ(ವಿಜಯನಗರ): ತಾಲೂಕಿನ ಹುಲಿಕಟ್ಟಿ ಗ್ರಾಮದ ಗುಳೇದ ಲಕ್ಕಮ್ಮದೇವಿ ಹುಂಡಿಯಲ್ಲಿ ಅರಬ್ ರಾಷ್ಟದ ನಾಣ್ಯ ಪತ್ತೆಯಾಗಿದ್ದು, ನೆರೆದವರಲ್ಲಿ ಅಚ್ಚರಿ ಮೂಡಿಸಿದೆ.
ದೇವಸ್ಥಾನದಲ್ಲಿ ಬುಧವಾರ ದೇವಿಯ ಜಾತ್ರೆಯ ಕಾಣಿಕೆ ಪೆಟ್ಟಿಗೆಯಲಾಗಿದೆ. ನಾಣ್ಯಗಳ ಎಣಿಕೆ ವೇಳೆ ಅರಬ್ ದೇಶದ ಬೆಳ್ಳಿ ಲೇಪಿತ ೧ ದಿರಹಮ್ ನಾಣ್ಯ ಪತ್ತೆಯಾಗಿದೆ. ಅದರ ಮೇಲೆ ೧ ಅರಬ್ ಎಮಿರೇಟ್ಸ್ ಎಂದು ಆಂಗ್ಲ ಮತ್ತು ಅರಬ್ಬಿಯಲ್ಲಿ ಬರೆಯಲಾಗಿದೆ.
ಸಮೀಪದ ಅರಣ್ಯ ಪ್ರದೇಶದಲ್ಲಿ ಜ.೩ರಂದು ದೇವಿಯ ಜಾತ್ರೆ ನಡೆದಿತ್ತು. ಈ ವೇಳೆ ಯಾರೋ ಭಕ್ತರು ಈ ನಾಣ್ಯವನ್ನು ಅರ್ಪಿಸಿದ್ದಾರೆ ಎಂದು ದೇವಸ್ಥಾನದ ಸಮಿತಿ ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾಹಿತಿ ನೀಡಿದರು.