

ಬೆಳ್ವೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಳ್ವೆ ಟೀಮ್ ಮಲೆನಾಡು ಹ್ಯೂಮಾನಿಟೇರಿಯನ್ ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್ ಆರ್ಡಿ ಬೆಳ್ವೆ ಗೋಳಿಯಂಗಡಿ ಸಹಭಾಗಿತ್ವದಲ್ಲಿ ಅಕ್ವಗಾರ್ಡ್ ಕೊಡುಗೆ ನೀಡಲಾಯಿತು. ಟ್ರಸ್ಟ್ ಅಧ್ಯಕ್ಷ ಮುಸ್ತಾಕ್ ಅಹಮ್ಮದ್ ಹಸ್ತಾಂತರಿಸಿದರು. ಪ್ರಮುಖರಾದ ಎಚ್.ವಸಂತಕುಮಾರ್ ಶೆಟ್ಟಿ ಬೆಳ್ವೆ, ವೈ ಪಟ್ಟಾಭಿರಾಮ್ ಭಟ್ ಮರೂರು, ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಬಾಬು ಶೆಟ್ಟಿ ಜಗ್ಲುಗುಡ್ಡೆ, ಅಣ್ಣಯ್ಯ ಶೆಟ್ಟಿ, ಕೀರ್ತಿಕುಮಾರ್ ಶೆಟ್ಟಿ, ಚಂದ್ರಿಕಾ ಬೆಳ್ವೆ, ಪತ್ರಕರ್ತ ಕೆ.ಸಂಜೀವ ಆರ್ಡಿ, ಜಯಶ್ರೀ, ಕಿಶನ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.