

ಕಳಸ: ಡಾ.ರಾಜ್ ಕನ್ನಡ ಸಂಘ ಕಳಸ ಹಾಗೂ ಕರವೇ(ಪ್ರವೀಣ್ ಶೆಟ್ಟಿ ಬಣ)ವತಿಯಿಂದ ಡಾ.ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಜನ್ಮದಿನವನ್ನು ಅಪ್ಪು ಉತ್ಸವವಾಗಿ ಆಚರಿಸಲಾಯಿತು. ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ 50 ಕೆಜಿ ತೂಕದ ಕೇಕ್ ಕತ್ತರಿಸಲಾಯಿತು. 12ಜನ ಶೌರ್ಯ ವಿಪತ್ತು ತಂಡ ಕಳಸ ಘಟಕದ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ನಂತರ ಶಂಕರ್ ಸಾರಥ್ಯದಲ್ಲಿ ಕೋಟೆಹೊಳೆ ಬ್ರದರ್ಸ್ ಇವರಿಂದ ಕರೋಕೆ ಆರ್ಕೇಸ್ಟ್ರಾ ನಡೆಯಿತು. ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ(ಪ್ರವೀಣ್ ಶೆಟ್ಟಿ ಬಣ)ಅಧ್ಯಕ್ಷ ಚೌಡನಾಯ್ಕ, ಗೌರವಾಧ್ಯಕ್ಷ ಶರ್ೀ, ಸಂತೋಷ್, ಅರವಿಂದ್, ಪೂರ್ಣೇಶ್, ಸುಂದರೇಶ್, ಶ್ಯಾಮಾಚಾರ್, ಆಶೋಕ್‌ಆಚಾರ್ ಇದ್ದರು.