

ಮಂಡ್ಯ: ಸಿನಿವಾಗಳಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿದಷ್ಟೇ ಯಶಸ್ವಿಯಾಗಿ ವಾಸ್ತವ ಬದುಕಿನಲ್ಲೂ ಸಾವಾಜಿಕ ಕಾಳಜಿಯಿಂದ ಕಾರ್ಯ ನಿರ್ವಹಿಸುವುದರ ಮೂಲಕ ಕರ್ನಾಟಕ ರತ್ನ ದಿ.ಪುನೀತ್ ರಾಜ್‌ಕುವಾರ್ ಸಾವಾಜಿಕ ನಾಯಕನಾಗಿ ಹೊರಹೊಮ್ಮಿದ್ದಾರೆ ಎಂದು ವಾಜಿ ಶಾಸಕ ಎ.ಬಿ. ರಮೇಶ ಬಂಡಿಸಿದ್ದೇಗೌಡ ಬಣ್ಣಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಭಾನುವಾರ ಆಯೋಜಿಸಿದ್ದ ಅಪ್ಪು ಜನೋತ್ಸವ ಸವಾರಂಭ ಉದ್ಘಾಟಿಸಿ ವಾತನಾಡಿದರು. ನಾಯಕ ನಟನಾಗಿ ಆದರ್ಶ ಬದುಕನ್ನು ನಡೆಸಿದ ಪುನೀತ್ ರಾಜ್‌ಕುವಾರ್ ಅವರ ಸಾಧನೆಗಳು ಶಾಶ್ವತ ಮತ್ತು ಸ್ಮರಣೀಯವಾಗಿವೆ. ಸವಾಜ ಸೇವೆ ಮತ್ತು ಸಿನಿವಾ ಕ್ಷೇತ್ರಗಳಲ್ಲಿ ತಂದೆಯನ್ನು ಮೀರುವಂತೆ ಬೆಳೆದದ್ದು ಅವರ ಪ್ರತಿಭೆ ಮತ್ತು ಹದಯವಂತಿಕೆಗೆ ಸಾಕ್ಷಿಯಾಗಿದೆ ಎಂದರು.
ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಅಶೋಕ್ ಜಯರಾಂ ವಾತನಾಡಿ, ಸವಾಜ ಸೇವೆ ವಾಡುತ್ತಿರುವ ಅನೇಕ ಗಣ್ಯರ ಖಾಸಗಿ ಬದುಕನ್ನು ಪರಿಶೀಲಿಸುವ ಮತ್ತು ಅಲ್ಲಿನ ಸಣ್ಣ ಲೋಪಗಳನ್ನು ವೈಭವೀಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪುನೀತ್ ರಾಜ್‌ಕುವಾರ್ ಅವರು ಖಾಸಗಿ ಬದುಕಿನಲ್ಲಿ ಪರಿಶುದ್ಧತೆ ಕಾಯ್ದುಕೊಂಡಿರುವುದು ವಿಶೇಷವಾಗಿದೆ ಎಂದರು.
ದೊಡ್ಡ ಮನೆ ಕುಟುಂಬದ ಸದಸ್ಯರು ಕಲಾ ನೈಪುಣ್ಯತೆಯ ಜತೆಗೆ ಸಾವಾಜಿಕ ಬದ್ಧತೆಯನ್ನು ಹೊಂದಿದ್ದಾರೆ. ವಿಶೇಷವಾಗಿ ಪುನೀತ್‌ರಾಜ್‌ಕುವಾರ್ ಅವರ ಕ್ರಿಯಾಶೀಲತೆ ಮತ್ತು ಪರೋಪಕಾರ ಮನೋಭಾವನೆ ನಮಗೆ ಆದರ್ಶವಾಗಬೇಕು. ದೇವರಾಜ ಅರಸು ವೇದಿಕೆ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಲಿ ಎಂದು ಸಲಹೆ ನೀಡಿದರು.
ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ‘ಅಪ್ಪನಂತೆ ಅಪ್ಪು ’ ಕುರಿತು ವಾತನಾಡಿದರು. ವಿಧಾನ ಪರಿಷತ್ ವಾಜಿ ಸದಸ್ಯ ಡಿ.ಎಸ್. ವೀರಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಡಿಜೆಸಿಎಂ ಸವಾಜ ಸೇವಾ ಟ್ರಸ್ಟ್ ಅಧ್ಯಕ್ಷ ತಿರುಮಲಾಪುರ ನಾರಾಯಣ್, ಜಿಲ್ಲಾ ಹಾಪ್‌ಕಾಮ್ಸ್ ನಿರ್ದೇಶಕ ಹೊಸಹಳ್ಳಿ ನಾಗೇಶ್, ಪ್ರೊ.ಹುಲ್ಕೆರೆ ಮಹದೇವು, ರಾಜ್ಯ ಹಣಕಾಸು ನಿಗಮದ ವಾಜಿ ಅಧ್ಯಕ್ಷ ಡಿ.ಕೃಷ್ಣಮೂರ್ತಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣ, ಯಲಿಯೂರು ಪ್ರದೀಪ್, ಪುಟ್ಟಸ್ವಾಮಿ ಇತರರಿದ್ದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಮಂಜುಳಾದೇವಿ, ವಾನಸಧಾರಾ ನಿರ್ದೇಶಕ ಜೋಷ್‌ಕುಟ್ಟಿ, ಆಶಾ ಸದನ ನಿರ್ದೇಶಕ ಬಿಜ್ರುನ್ಸೀಸ್, ಅಪ್ಪು ಬಿರಿಯಾನಿ ರೆಸ್ಟೋರೆಂಟ್‌ನ ವಾಲೀಕ ಗುರುರಾಜ್ ಕಿರಗಂದೂರು ಅವರನ್ನು ಸನ್ಮಾನಿಸಲಾಯಿತು.