ಜಾತ್ರೆಯಲ್ಲಿ ಪುನೀತ್ ರಾಜಕುಮಾರ್ ಪೋಟೋ ಹೊತ್ತು ಸಾಗಿದ ಭಕ್ತೆ; ತಿಂಗಳುಗಳು ಕಳೆದರೂ ಅಭಿಮಾನವಿನ್ನೂ ಅಬಾಧಿತ..

Puneeth
Published on

ಹಾಸನ: ಪವರ್​ಸ್ಟಾರ್​ ಪುನೀತ್ ರಾಜಕುಮಾರ್ ಎಲ್ಲರನ್ನೂ ಅಗಲಿ ತಿಂಗಳುಗಳೇ ಕಳೆದಿದ್ದರೂ ಅವರ ಮೇಲಿನ ಅಭಿಮಾನವಿನ್ನೂ ಅಬಾಧಿತವಾಗಿಯೇ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ಆಗಾಗ್ಯೆ ಅಲ್ಲಲ್ಲಿ ನಿದರ್ಶನಗಳು ಕಾಣಿಸುತ್ತಿರುತ್ತವೆ. ಅಂಥದ್ದೇ ಒಂದು ಅಭಿಮಾನ ಜಾತ್ರೆಯೊಂದರಲ್ಲಿ ಕಂಡುಬಂದಿದೆ.

ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿ ನಡೆದ ಶ್ರೀ ದೊಡ್ಡಮ್ಮ ದೇವಸ್ಥಾನದ ಜಾತ್ರೆಯಲ್ಲಿ ಪುನೀತ್ ಕುರಿತ ಅಭಿಮಾನ ಜನರ ಗಮನ ಸೆಳೆದಿದೆ. ಇಲ್ಲಿ ಮಹಿಳೆಯೊಬ್ಬರು ಪುನೀತ್​ ಫೋಟೋವೊಂದನ್ನು ತಲೆ ಮೇಲೆ ಇಟ್ಟುಕೊಂಡು ಜಾತ್ರೆಯಲ್ಲಿ ಸಾಗಿದ್ದಾರೆ.

ಕರೊನ ಕಾರಣದಿಂದ ಕಳೆದ ವರ್ಷ ಇಲ್ಲಿ ಜಾತ್ರೆ ನಡೆದಿರಲಿಲ್ಲ. ಹೀಗಾಗಿ ಈ ವರ್ಷ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಜಾತ್ರೆಯಲ್ಲಿ ಪುನೀತ್ ಅಭಿಮಾನಿಯೂ ಆಗಿರುವ ಈಕೆಯ ಈ ನಡೆ ಅಪ್ಪು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net