ಅಪ್ಪು ಅಭಿಮಾನಿ ಸೈಕಲ್ ಸವಾರಿ

IMG_20240810_212920_105-1.jpg
Published on

ಹುಬ್ಬಳ್ಳಿ: ಪರಿಸರ ರಕ್ಷಣೆಗಾಗಿ ಸೈಕಲ್ ಮೇಲೆ ದೇಶ- ವಿದೇಶ ಪರ್ಯಟನೆ ಮಾಡುತ್ತ ಧಾರವಾಡಕ್ಕೆ ಆಗಮಿಸಿದ್ದ ತಮಿಳುನಾಡಿನ ಕೆ. ಮುತ್ತು ಸೆಲ್ವನ್ ಅವರನ್ನು ಧಾರವಾಡದ ಪೊಲೀಸ್ ಸಹಾಯಕ ಆಯಕ್ತರ ಕಚೇರಿಯಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.

ಎಸಿಪಿ ಪ್ರಶಾಂತ ಸಿದ್ದನಗೌಡರ, ಇನ್ಸ್ ಪೆಕ್ಟರ್ ಎನ್.ಸಿ. ಕಾಡದೇವರ, ವೀರೇಶ ಕೆಲಗೇರಿ, ಕರಣ ದೊಡವಾಡ, ಉದಯ ಯಂಡಿಗೇರಿ, ಶೇಖರ ಕವಳಿ, ಸಂದೀಪ ಸಾಬಳೆ, ಶ್ರೀಕಾಂತ ರಾಮಪುರೆ, ಅಶೋಕ ಶೆಟ್ಟರ್, ಇತರರು ಇದ್ದರು.

ಅಪ್ಪು ಅಭಿಮಾನಿಯೂ ಆಗಿರುವ ಮುತ್ತು ಸೆಲ್ವನ್ ಅವರು ಮೂರು ವರ್ಷದಿಂದ ಸೈಕಲ್ ಮೇಲೆ ಈವರೆಗೆ 23ಸಾವಿರ ಕಿ.ಮೀ. ಸಂಚರಿಸಿದ್ದಾರೆ.

2015ರ ವರೆಗೂ ಸಂಚಾರ ಕೈಗೊಳ್ಳಲಿರುವ ಇವರು ಪ್ರತಿ ಊರಲ್ಲಿ ಗಿಡ ನೆಡುವ ಕಾರ್ಯ ಮಾಡುತ್ತಿದ್ದಾರೆ. ಒಟ್ಟು 34 ಸಾವಿರ ಕಿ.ಮೀ. ಸೈಕಲ್ ಸವಾರಿ ಮಾಡುವ ಮೂಲಕ ದಾಖಲೆ ನಿರ್ಮಿಸುವ ಹಂಬಲದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net