50 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ಕುಡಿಯುವ ನೀರು ಪೂರೈಸುವ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು 50 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯಪುರ ಮಹಾನಗರಕ್ಕೆ ಕೃಷ್ಣಾ ನದಿಯಿಂದ ನೀರೆತ್ತಿ ಕೊಲ್ಹಾರದಿಂದ ಮುಳವಾಡ, ಹೊನಗನಹಳ್ಳಿ, ವಿಜಯಪುರ ಮಾರ್ಗವಾಗಿ ನೀರು ಪೂರೈಸಲು ಅಳವಡಿಸಿರುವ ಪಿಎಸ್​ಸಿ ಕೊಳವೆ ಮಾರ್ಗ ಪದೇ ಪದೇ ಒಡೆದು ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಸರಿಪಡಿಸಲು ಪಿಎಸ್​ಸಿ ಕೊಳವೆ ಮಾರ್ಗ ಬದಲಾಯಿಸಿ, ಎಂ.ಎಸ್​. ಪೈಪ್​ ಅಳವಡಿಸುವ 50 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ.

2011ರ ಜನಗಣತಿಯಂತೆ ವಿಜಯಪುರ ನಗರದ ಜನಸಂಖ್ಯೆ 3,26,360 ಇದ್ದು, ಪ್ರಸ್ತುತ ಅಂದಾಜು 4,80,000 ಇರುತ್ತದೆ. ವಿಜಯಪುರ ನಗರಕ್ಕೆ ಯೋಜನೆಗಾಗಿ ಕೃಷ್ಣಾ ನದಿ ಆಲಮಟ್ಟಿ ಹಿನ್ನೀರಿನಿಂದ 1ನೇ ಹಂತ, 2ನೇ ಹಂತ ಹಾಗೂ ಭೂತನಾಳ ಕೆರೆ ಮೂಲದಿಂದ ದಿನಂಪ್ರತಿ 83.32 ದಶಲ ಲೀಟರ್​ ನೀರು ಪೂರೈಕೆ ಮಾಡುವ ಯೋಜನೆಗಳನ್ನು ವಿನ್ಯಾಸ ಮಾಡಲಾಗಿದೆ.

ಹಾಲಿ ಅಳವಡಿಸಿರುವ ಪಿಎಸ್​ಸಿ ಕೊಳವೆ ಮಾರ್ಗ ಮಧ್ಯ ಹೊನಗನಹಳ್ಳಿ& ವಿಜಯಪುರ ಕೊನೆಯ 11 ಕಿಮೀ ಭಾಗದಲ್ಲಿ ಕೊಳವೆ ಮಾರ್ಗವು ಪದೇ ಪದೇ ಒಡೆದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಕುರಿತು 2&3 ಸಭೆಗಳನ್ನು ಉನ್ನತ ಅಧಿಕಾರಿಗಳೊಂದಿಗೆ ನಡೆಸಿ ವಿಜಯಪುರ ನಗರಕ್ಕೆ ಯಾವುದೇ ವ್ಯತ್ಯಯ ಇಲ್ಲದೇ ಕುಡಿಯುವ ನೀರು ಪೂರೈಸಲು ಸದರಿ ಪ್ರದೇಶದಲ್ಲಿ ಪಿಎಸ್​ಸಿ ಕೊಳವೆ ಮಾರ್ಗ ಬದಲಾಯಿಸಿ ಎಂ.ಎಸ್​. ಪೈಪ್​ ಅಳವಡಿಸುವುದು ಹಾಗೂ ಇತರೆ ಕಾಮಗಾರಿ ಕೈಗೊಳ್ಳಲು 50 ಕೋಟಿ ರೂಪಾಯಿ ಮೊತ್ತದ ಯೋಜನೆ ಕೈಗೊಳ್ಳುವುದು ಅವಶ್ಯಕವಾಗಿತ್ತು ಎಂದು ಸಚಿವ ಎಂ.ಬಿ.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net