ಎಲ್‌ಇಡಿ ಬಲ್ಬ್ ಅಳವಡಿಕೆ ಕಾಮಗಾರಿಗೆ ಅನುಮೋದನೆ; ಶಾಸಕ ಬಸನಗೌಡ ಪಾಟೀಲ ಯತ್ನಾಳ

Road Development, Grants, Vijayapura, Mallikarjuna Ashram, Jnana Yoga Ashram, Siddharudh Math, Basanagowda Patil Yatnala,
ಬಸನಗೌಡ ಪಾಟೀಲ ಯತ್ನಾಳ
Published on

ವಿಜಯಪುರ: ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನಗರದ ಬಹುದಿನದ ಬೇಡಿಕೆಯಾಗಿರುವ ಎಲ್‌ಇಡಿ ಬಲ್ಬ್ ಅಳವಡಿಕೆ ಕಾಮಗಾರಿಗೆ ಸರ್ಕಾರದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.

ಸುಮಾರು 36.36 ಕೋಟಿ ಮೊತ್ತದ ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ಅನುಷ್ಠಾನ ಗೊಳಿಸಲು 2018 ರಿಂದಲೇ ಸತತ ಮೂರು ಬಾರಿ ಟೆಂಡರ್ ಕರೆದು ತಾಂತ್ರಿಕ ಕಾರಣಗಳಿಂದಾಗಿ ರದ್ದಾಗಿತ್ತು. ಈ ಬಗ್ಗೆ ಅಧಿವೇಶನಗಳಲ್ಲಿಯೂ ಚರ್ಚೆ ನಡೆಸಲಾಗಿತ್ತು. ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಲಾಗಿತ್ತು. ಇದೀಗ ಸರ್ಕಾರದ ಅನುಮೋದನೆ ದೊರಕಿದೆ ಎಂದರು.

ಈ ಯೋಜನೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ನಡೆಸಲಾಗುತ್ತದೆ. ಏಳು ವರ್ಷಗಳ ಕಾಲ ಗುತ್ತಿಗೆ ಪಡೆದ ಕಂಪನಿಯವರೇ ನಿರ್ವಹಣೆ ಮಾಡಲಿದ್ದಾರೆ. ಸ್ವಯಂ ಚಾಲಿತ ನಿರ್ವಹಣೆ ಇರುವುದರಿಂದ ಮತ್ತು ಎಲ್ಇಡಿ ಬಲ್ಬ್‌ಗಳನ್ನು ಬಳಸುವುದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಮಹಾನಗರ ಪಾಲಿಕೆಗೆ ಪ್ರತಿ ವರ್ಷ ಸುಮಾರು ಶೇ.63.3 ಅಂದರೆ ಸುಮಾರು 8 ರಿಂದ 9 ಕೋಟಿ ರೂಪಾಯಿಗಳ ಉಳಿತಾಯವಾಗುತ್ತದೆ ಎಂದು ಅಂದಾಜಿಸಿರುವುದಾಗಿ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net