

ಹಾಸನ: ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ವತಿಯಿಂದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸರ್ಕಾರಿ ನೌಕರರ ಭವನದಲ್ಲಿ ಇತ್ತೀಚೆಗೆ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣಗೌಡ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಖಜಾಂಚಿ ಕೆ.ಆರ್.ಹೇಮಂತ್ ಲೆಕ್ಕಾ ಪರಿಶೋಧನಾ ವರದಿ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಡಾ.ಲಕ್ಷ್ಮೀಕಾಂತ್ ವಾರ್ಷಿಕ ಸಭೆಯ ಅಜೆಂಡಾ ತಿಳಿಸಿದರು.
ರಾಜ್ಯ ಪರಿಷತ್ ಸದಸ್ಯ ರಾಜು, ಜಿಲ್ಲಾ ಸಂಘದ ನಿಯೋಗವು ರಾಜ್ಯ ಸಂಘದೊಂದಿಗೆ ಚರ್ಚಿಸಿ ಸಂಘದ ಕಟ್ಟಡ ಕಾಮಗಾರಿ, ಜಿಲ್ಲಾ ಸಂಘದ ಬೇಡಿಕೆಗಳಿಗೆ ರಾಜ್ಯ ಸಂಘದಿಂದ ತುರ್ತಾಗಿ ಅನುಮೋದನೆ ಪಡೆಯುವುದಾಗಿ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣಗೌಡ 2024-25ನೇ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳು, ಮಾಸಿಕ ಸಭೆ ಮತ್ತು ಸರ್ಕಾರಿ ನೌಕರರ ಕ್ರೀಡಾಕೂಟದ ಬಗ್ಗೆ ವಿವರಿಸಿದರು. ನೂತನ ಕಟ್ಟಡ ಕಾಮಗಾರಿ ಹಾಗೂ ಮಳಿಗೆಗಳ ಹರಾಜು ಪ್ರಕ್ರಿಯೆ, ಪದಾಧಿಕಾರಿಗಳ ಆಯ್ಕೆ ಇತರ ವಿಷಯಗಳ ಕುರಿತು ವಿವರಿಸಿದರು.
ಕಾರ್ಯಾಧ್ಯಕ್ಷ ವಿಷ್ಣುಪ್ರಕಾಶ್ ಇತರರಿದ್ದರು.