ಬಿಜೆಪಿಗೆ ಯತ್ನಾಳ್​ ಶಾಕ್: ಸಿಎಂ ಪದವಿಗೆ 2500 ಕೋಟಿ , ಪೇಚು ತಂದ ಗಂಭೀರ ಆರೋಪ​

CM Bommai Yatnal
Published on

ಬೆಂಗಳೂರು: ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪಕ್ಷದ ವಿರುದ್ಧ ಮಾಡಿರುವ ಗಂಭೀರ ಆರೋಪ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕತ್ವಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ಬೆಳವಣಿಗೆ ಪದ ರಾಜ್ಯ ಟಕದಲ್ಲಿ ಹಿಡಿತವಿಲ್ಲದ ನಾಯಕತ್ವವನ್ನು ಸಾಬೀತುಪಡಿಸುವ ಜತೆಯಲ್ಲೇ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಉಸ್ತುವಾರಿಯಿಂದ ಸಂಟನೆಯಲ್ಲಿ ಶಿಸ್ತು ದೂರಾಗಿ ಪದ ಕಾರ್ಯಕರ್ತರಿಗೂ ಇರುಸುಮುರಿಸು ಉಂಟು ಮಾಡಿದೆ.

ಪ್ರತಿ ನಿತ್ಯ ಒಂದಿಲ್ಲೊಂದು ಹೇಳಿಕೆಗಳಿಂದಲೇ ಸರ್ಕಾರಕ್ಕೆ ಮುಜುಗರ ಉಂಟುಮಾಡುತ್ತ ಬಂದಿರುವ ಯತ್ನಾಳ್​, ರಾಮದುರ್ಗ ತಾಲೂಕಿನಲ್ಲಿ ಜರುಗಿದ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಮಾತನಾಡುತ್ತ, "ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು' ಎನ್ನುವ ಮೂಲಕ ಪ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಯತ್ನಾಳ್​ ಅವರ ಈ ಹೇಳಿಕೆಗೆ ಪಕ್ಷದ ನಾಯಕರು ನಿರುತ್ತರರಾಗಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಮೆತ್ತಿಕೊಂಡಿರುವ ಪರ್ಸೆಂಟೇಜ್​, ನೇಮಕಾತಿ ಹಗರಣಗಳ ಕಳಂಕದಿಂದ ಹೊರಬರಲು ಪರದಾಡುತ್ತಿರುವ ಸಂದರ್ಭದಲ್ಲಿಯೇ ಯತ್ನಾಳ್​ಅವರ ಈ ಆರೋಪ ನಾಯಕತ್ವಕ್ಕೆ ಕಪುಚುಕ್ಕೆಯನ್ನಿಟ್ಟಿದೆ. ಪ್ರತಿಪಕ್ಷಗಳ ಕೈಗೂ ಅಸ್ತ್ರ ದೊರಕಿಸಿಕೊಟ್ಟಿದೆ.

ಯತ್ನಾಳ್​ ಹೇಳಿದ್ದೇನು?: "ದೆಹಲಿಯಿಂದ ಬಂದ ಕೆಲವು ಲೀಡರ್​ಗಳು 2500 ಕೋಟಿ ರೂ. ಕೊಡಿ, ಸಿಎಂ ಮಾಡ್ತೀವಿ ಅಂದಿದ್ರು. ಮಕ್ಕಳಾ 2,500 ಕೋಟಿ ರೂ. ಅಂದ್ರೆ ಏನ್​ ಅಂತ ತಿಳಿದೀರಿ ಅಂತ ನಾನು ಅವರನ್ನು ಕೇಳಿದೆ. ಆ ಎರಡೂವರೆ ಸಾವಿರ ಕೋಟಿ ಹೆಂಗ್​ ಇಡೋದು. ಕೋಣೆಯಲ್ಲಿ ಇಡೋದಾ, ಗೋದಾಮಿನಲ್ಲಿ ಇಡೋದಾ? ಎಂದು ಪ್ರಶ್ನಿಸಿದೆ. ರಾಜಕಾರಣದಲ್ಲಿ ಮೋಸ ಮಾಡ್ತಾರೆ. ವಾಜಪೇಯಿ ನೆರಳಲ್ಲಿ ಕೆಲಸ ಮಾಡಿದವನು ನಾನು. ಅಡ್ವಾಣಿ, ರಾಜನಾಥ್​ ಸಿಂಗ್​ ನನ್ನನ್ನು ಬಸವನಗೌಡ ಅಂತಾ ಹೆಸರು ಹೇಳಿ ಕರೀತಿದ್ರು.'

ನಾಯಕರೇ ಗುರಿ: ವಾರದ ಹಿಂದಷ್ಟೇ ಗೃಹ ಸಚಿವರ ವಿರುದ್ಧ ಹೇಳಿಕೆ ನೀಡಿದ್ದ ಯತ್ನಾಳ್​ ಸರ್ಕಾರಕ್ಕೆ ಮುಜುಗರ ತಂದಿದ್ದರು. ಗೃಹ ಸಚಿವರ ಹುದ್ದೆ ಖಾಲಿ ಇದೆ ಎಂದು ಜಾಹೀರಾತು ನೀಡಬೇಕು ಎಂದು ತಮ್ಮದೇ ಸರ್ಕಾರದ ವಿರುದ್ಧ ನಡೆಸಿದ ದಾಳಿ ಪ್ರತಿಪದ ಗೇಲಿಗೆ ಸರಕಾಯಿತು. ರಾಜಕೀಯ ವಲಯದಲ್ಲಿ ಯತ್ನಾಳ್​ ಹೇಳಿಕೆ ಗಂಭೀರವಾಗಿ ಪರಿಗಣನೆ ಆಗದಿದ್ದರೂ, ಪ್ರತಿಪಕ್ಷ ಕಾಂಗ್ರೆಸ್​ 2500 ಕೋಟಿ ರೂ. ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿ ತನಿಖೆಗೂ ಆಗ್ರಹಿಸಿದೆ. ಯತ್ನಾಳ್​ ಹೇಳಿಕೆ ಮುಂದಿಟ್ಟುಕೊಂಡು ಜಾಲತಾಣದಲ್ಲಿ ಬಿಜೆಪಿಯನ್ನು ಮುಜುಗರಕ್ಕೆ ತಳ್ಳಿದೆ.

ನಿರಂತರ ಮುಕ್ಕು 40 ಪರ್ಸೆಂಟ್​ ಕಮಿಷನ್​ ಆರೋಪದಿಂದ ಹೊರಬರಲು ಸರ್ಕಾರ ಯತ್ನಿಸುತ್ತಿದ್ದಾಗಲೇ, ಈಶ್ವರಪ್ಪ ತಲೆದಂಡ ಕೊಡಲೇಬೇಕಾದ ಸನ್ನಿವೇಶ ಎದುರಾಯಿತು. ಪಿಎಸ್​ಐ ನೇಮಕ ಅಕ್ರಮದಲ್ಲಿ ಬಿಜೆಪಿ ನಾಯಕಿ ಸಿಕ್ಕಿಬಿದ್ದಿದ್ದು, ಸಹಾಯಕ ಪ್ರಾಧ್ಯಾಪಕರ ನೇಮಕದಲ್ಲೂ ಅಕ್ರಮ ನಡೆದಿದ್ದು, ಹೀಗೆ ಸರಣಿ ಪ್ರಕರಣಗಳು ಸರ್ಕಾರದ ಇಮೇಜ್​ಗೆ ನಿರಂತರವಾಗಿ ಪೆಟ್ಟುನಿಡಿದೆ.

ಅಮಿತ್​ ಷಾ ಈ ಹಿಂದೆ ಚುನಾವಣೆಗಳು ನಮಗೆ ವ್ಯವಹಾರ ಇದ್ದಂತೆ ಎಂಬ ಹೇಳಿಕೆ ನೀಡಿದ್ದರು. ಇದೀಗ ಯತ್ನಾಳ್​ ನೀಡಿರುವ ಹೇಳಿಕೆ ನೋಡಿದಾಗ ಅದು ನಿಜ ಅನ್ನಿಸುತ್ತದೆ. ಯತ್ನಾಳ್​ ಹೇಳಿಕೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಗಿದೆ. ರಾಜ್ಯಪಾಲರು ಕೂಡಲೇ ತನಿಖೆಗೆ ಆದೇಶ ನೀಡಬೇಕು. | ಬಿ.ಕೆ. ಹರಿಪ್ರಸಾದ್​ ವಿಧಾನ ಪರಿಷತ್​ ಪ್ರತಿಪಕ್ಷದ ನಾಯಕ ಯತ್ನಾಳ್​ ಕೇಂದ್ರದ ಮಾಜಿ ಸಚಿವ ರಾಗಿದ್ದು. ಸದ್ಯ ಹಾಲಿ ಶಾಸಕ ರಿದ್ದಾರೆ. ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು. | ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷ ಯತ್ನಾಳ್​ ಹೇಳಿಕೆ ಗಮನಿಸಿದಾಗ ಸಿಎಂ ಬೊಮ್ಮಾಯಿ ಎಷ್ಟು ಕೋಟಿ ರೂ. ಕೊಟ್ಟು ಮುಖ್ಯಮಂತ್ರಿ ಹುದ್ದೆ ಪಡೆದರು ಎಂಬ ಅನುಮಾನ ಮೂಡುತ್ತದೆ. ಇದನ್ನು ಅವರೇ ಬಗೆ ಹರಿಸಬೇಕು. | ಬಿ.ವಿ. ಶ್ರೀನಿವಾಸ್​ ಅಧ್ಯಕ್ಷ ಅಖಿಲ ಭಾರತ ಯುವ ಕಾಂಗ್ರೆಸ್​ ಸಮಿತಿ

ತನಿಖೆಗೆ ಕಾಂಗ್ರೆಸ್​ ಆಗ್ರಹ ಮುಖ್ಯಮಂತ್ರಿ ಆಗಬೇಕಾದರೆ 2500 ಕೋಟಿ ರೂ. ಹಾಗೂ ಮಂತ್ರಿ ಆಗಬೇಕಾದರೆ 100 ಕೋಟಿ ರೂ. ನೀಡಬೇಕು ಎಂಬ ಯತ್ನಾಳ್​ ಹೇಳಿಕೆಯ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕೆಂದು ಕಾಂಗ್ರೆಸ್​ ನಾಯಕರು ಆಗ್ರಹಿಸಿದ್ದಾರೆ.

ಯತ್ನಾಳ್​ ಹೇಳಿದ್ದೇನು?

* ನಮ್ಮಲ್ಲಿ 100 ಕೋಟಿ ರೂ., 50 ಕೋಟಿ ರೂ. ಹಣ ಕೊಟ್ಟು ಮಂತ್ರಿ ಆಗುತ್ತಾರೆ. ಆ ಮೇಲೆ ಕರ್ನಾಟಕ ಲೂಟಿ ಮಾಡುತ್ತಾರೆ. ನಾನು ಅಷ್ಟೊಂದು ಹಣ ಎಲ್ಲಿಂದ ಕೊಡಲಿ? ನನ್ನನ್ನು ಯಾವುದಾದರೂ ಕೇಸ್​ನಲ್ಲಿ ಸಿಲುಕಿಸಲು ನಮ್ಮವರು ಪ್ರಯತ್ನಿಸುತ್ತಿದ್ದಾರೆ.

* ರಾಜಕಾರಣ ಬಹಳ ಕೆಟ್ಟು ಹೋಗಿದ್ದು, ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಚುನಾವಣೆ ಸಮೀಪ ಬಂತೆಂದರೆ ನಿಮ್ಮನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್​ ಷಾ, ಕೈ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸ್ತಿವಿ. ಟಿಕೇಟ್​ ಕೊಡಿಸ್ತೀವಿ ಎಂದು ಕೆಲವರು ಬರುತ್ತಾರೆ.

* ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೆಹಲಿ ಗಿರಾಕಿಗಳು ನಿಮಗೆ ಟಿಕೆಟ್​ ಕೊಡಿಸ್ತಿವಿ ಅಂಥ ಬರುತ್ತಾರೆ. ಅವರಿಂದ ಹುಷಾರಾಗಿ ಇರಬೇಕು.

* ನೇರವಾಗಿ ಮಾತನಾಡಿದರೆ, ಸತ್ಯ ಹೇಳಿದರೆ ರಾಜಕಾರಣದಲ್ಲಿ ಇರಲು ಸಾಧ್ಯವಿಲ್ಲ. ಸುಳ್ಳು ಹೇಳುವವರು, ಮೋಸ ಮಾಡುವವರು ರಾಜಕಾರಣದಲ್ಲಿ ಉಳಿಯಲು ಸಾಧ್ಯ.

* ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ಎಂದು ಹೋರಾಟ ಮಾಡುತ್ತಿದ್ದೇನೆ. ವಿನಾ ಮಂತ್ರಿಗಿರಿಗಾಗಿ ಅಲ್ಲ.

* ಪಕ್ಷದಲ್ಲಿ ಒಂದು ಕಾಲಕ್ಕೆ ಎಲ್ಲವೂ ನನ್ನ ಕೈಯಲ್ಲಿತ್ತು. ಆದರೆ, ಇದೀಗ ಎಲ್ಲವು ದೊಡ್ಡ ದೊಡ್ಡವರ ಕೈಯಲ್ಲಿದೆ. ನಮ್ಮ ಸಮಾಜದ ಹೋರಾಟ ಹತ್ತಿಕ್ಕಲು ನನಗೆ ಮಂತ್ರಿ ಸ್ಥಾನದ ಲಾಲಿಪಪ್​ ಕೊಡಬೇಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರವಾಗಿ ಹೇಳಿದ್ದೇನೆ.

ಸಿಎಂ ಗರಂ

ಯತ್ನಾಳ್​ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಂ ಆಗಿದ್ದಾರೆ. ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮನೆಗೆ ಹೋಗಿದ್ದಾಗ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸದೆಯೇ ಅವರು ಸಿಟ್ಟಾಗಿ ತೆರಳಿದರು.

ದುರ್ಬಲ ನಾಯಕತ್ವ ರಾಜ್ಯ ಬಿಜೆಪಿ ನಾಯಕತ್ವ ದಿನದಿನಕ್ಕೂ ದುರ್ಬಲವಾಗಿ ಕಾಣಿಸಲಾರಂಭಿಸಿದೆ. ಯತ್ನಾಳ್​ ಅವರ ಈ ಹಿಂದಿನ ವಿಮರ್ಶೆಗಳಿಗೂ ಪದ ರಾಜ್ಯಾಧ್ಯರೇ ಚಕಾರ ಎತ್ತದ ಕಾರಣ, ಆ ಹೇಳಿಕೆ ಹಿಂದೆಯೂ ಪದ ಅಧ್ಯರೇ ಇರಬಹುದೆಂದು ಚರ್ಚೆಯಾಗುತ್ತಿದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ, ಪದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಸಂಟನೆ ಮೇಲೆ ಪ್ರಭಾವ ಬೀರುವಂತೆ ಕಾಣಿಸಿಲ್ಲ. ಇಲ್ಲಿನ ಆಗುಹೋಗುಗಳ ಬಗ್ಗೆ ಅವರು ತಲೆಕೆಡಿಸಿಕೊಂಡಂತೆಯೂ ಇಲ್ಲ.

ಯತ್ನಾಳ್​ ಬಿಜೆಪಿ ಲೀಡರ್​, ಕೇಂದ್ರದ ಮಾಜಿ ಮಂತ್ರಿ. ಅವರು ಹೇಳಿದ್ದು ಸತ್ಯ ಇರಬೇಕು. ಪಿಎಸ್​ಐಗೆ 50ರಿಂದ 80 ಲಕ್ಷ ರೂ. ತಗೋತಾರಂದ್ರೆ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ ರೂ. ಕೇಳಿದ್ದರಲ್ಲಿ ಸತ್ಯವಿರಬೇಕು ಅನಿಸುತ್ತದೆ. | ಸಿದ್ದರಾಮಯ್ಯ ವಿಧಾನಸಭೆ ಪ್ರತಿಪಕ್ಷ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net