

ಕೋಟ: ನಬಾರ್ಡ್‌ನ ಡಿಜಿಎಂ ವಾಲಿನಿ ಸುವರ್ಣ ಮತ್ತು ನಬಾರ್ಡ್ ಅಧಿಕಾರಿ ಎಸ್.ಪಿ.ಮಹಾಪಾತ್ರ ನೇತೃತ್ವದ ತಂಡ ಓಡಿಸ್ಸಾ ರಾಜ್ಯದ ವಿವಿಧ ಕೃಷಿ ಪತ್ತಿನ ಸಹಕಾರ ಸಂಗಳ ಅಧ್ಯಕ್ಷರು, ಸದಸ್ಯರು, ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸಹಿತ ಸುವಾರು 20 ಸಹಕಾರಿ ಮುಖಂಡರು ಕೋಟ ಸಹಕಾರಿ ವ್ಯವಸಾಯಕ ಸಂಕ್ಕೆ ಇತ್ತೀಚೆಗೆ ಭೇಟಿ ನೀಡಿದರು.
ಕೋಟ ಸಹಕಾರಿ ವ್ಯವಸಾಯಕ ಸಂದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಂದ ಕಾರ್ಯವೈಖರಿ, ಸಾಲ ಸೌಲಭ್ಯಗಳು, ಸ್ವಸಹಾಯ ಸಂ ರಚನೆ, ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದರು.
ನಬಾರ್ಡ್ ತಂಡ ಕೋಟದ ಸಹಕಾರಿ ಸಂಘದ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು. ಬಳಿಕ ನಬಾರ್ಡ್ ತಂಡ ಕೃಷಿ ಉಪಕರಣಗಳ ವಾರಾಟ ಮಳಿಗೆ ಮತ್ತು ಮಣೂರು ಶಾಖೆಯ ನೂತನ ಕಟ್ಟಡ, ಗೋದಾಮು, ವಾಣಿಜ್ಯ ಮತ್ತು ವಸತಿ ಸಂಕೀರ್ಣಕ್ಕೆ ಭೇಟಿ ನೀಡಿದರು. ಸಂದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ ಕುವಾರ್ ಶೆಟ್ಟಿ ವಂದಿಸಿದರು.