

ಕಕಮರಿ: ಪ್ರತಿಭೆ ಹೊರತರಲು ಶ್ರೀ ಅಮ್ಮಾಜೇಶ್ವರಿ ಕಬಡ್ಡಿ ಕಮಿಟಿ ವೇದಿಕೆ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಾಯಣ್ಣ ರಾಜ್ಯ ಯುವ ಪ್ರಶಸ್ತಿ ವಿಜೇತ ಅಪ್ಪು ಪೂಜಾರಿ ಹೇಳಿದರು.
ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಶ್ರೀ ಅಮ್ಮಾಜೇಶ್ವರಿ ಕಬಡ್ಡಿ ಕಮಿಟಿ ಕಕಮರಿ, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ವತಿಯಿಂದ 60 ಕೆಜಿ ಮ್ಯಾಟ್ ಮೇಲಿನ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉಧ್ಘಾಟಿಸಿ ಮಾತನಾಡಿದರು. ಕಕಮರಿ ಗುರುದೇವಾಶ್ರಮ ಆತ್ಮಾರಾಮ್ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಿದ್ದರು.
ಕಬಡ್ಡಿಯಲ್ಲಿ ನಿಡಗುಂದಿ ತಂಡ ಪ್ರಥಮ ಸ್ಥಾನ, ಜಾಡರ ಬಬಲಾದಿ ತಂಡ ದ್ವಿತೀಯ, ಕಕಮರಿ ಅಮ್ಮಾಜೇಶ್ವರಿ ತಂಡ ತತೀಯ ಹಾಗೂ ಬಾಳಿಗೇರಿ ತಂಡ ಚತುರ್ಥ ಸ್ಥಾನ ಪಡೆದವು. ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ, ಸಿಕಂದರ ಮುಜಾವರ, ಈರಣ್ಣ ಹೊನವಾಡ, ಸಂಗಮೇಶ ಪುಠಾಣಿ, ಮಲ್ಲಿಕಾರ್ಜುನ ಶೇಡ್ಯಾಳ, ಸಿದ್ದಪ್ಪ ಬಿಳ್ಳೂರ ಇತರರಿದ್ದರು.