ಬಸವರಾಜ ಮತ್ತಿಕಟ್ಟಿ ಟ್ರಸ್ಟ್ ಸೇವೆಗೆ ಶ್ಲಾಘನೆ

24 GJD 1
Published on

ಗಜೇಂದ್ರಗಡ: ಬಡವರಿಗಾಗಿ ಒಂದಿಲ್ಲೊಂದು ಸಾಮಾಜಿಕ ಕಾರ್ಯ ಮಾಡುತ್ತಿರುವ ಬಸವರಾಜ ಕೊಟಗಿ (ಮತ್ತಿಕಟ್ಟಿ) ಚಾರಿಟಬಲ್ ಟ್ರಸ್ಟ್‌ನ ಸೇವಾ ಕಾರ್ಯ ಶ್ಲಾಘನೀಯ ಎಂದು ಗಜೇಂದ್ರಗಡ ಬಣಜಿಗ ಸಮಾಜದ ಗೌರವಾಧ್ಯಕ್ಷ ಡಾ.ಬಿ.ವಿ. ಕಂಬಳ್ಯಾಳ ಹೇಳಿದರು.

ಪಟ್ಟಣದ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಮಾಜ ಸೇವಕ ಬಸವರಾಜ ಕೊಟಗಿ (ಮತ್ತಿಕಟ್ಟಿ) ಅವರ 3ನೇ ಪುಣ್ಯಸ್ಮರಣೆ ಅಂಗವಾಗಿ ಬಸವರಾಜ ಕೊಟಗಿ (ಮತ್ತಿಕಟ್ಟಿ) ಚಾರಿಟಬಲ್ ಟ್ರಸ್ಟ್, ಗಂಗೋತ್ರಿ ಪಬ್ಲಿಕ್ ಸ್ಕೂಲ್, ವೆಂಕಟೇಶ್ವರ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ದುಬಾರಿ ದಿನಗಳಲ್ಲಿ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿರುವ ಮತ್ತಿಕಟ್ಟಿ ಕುಟುಂಬದ ಕಾರ್ಯ ಅನುಕರಣೀಯ ಎಂದರು. ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅಪ್ಪು ಮತ್ತಿಕಟ್ಟಿ ಮಾತನಾಡಿ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಆರೋಗ್ಯ ತಪಾಸಣೆ, ದಂತ ತಪಾಸಣೆ, ನೇತ್ರ ತಪಾಸಣೆಯಂತಹ ಕಾರ್ಯಗಳನ್ನು ನಮ್ಮ ಸಂಘದಿಂದ ಪ್ರತಿವರ್ಷ ಹಮ್ಮಿಕೊಳ್ಳುತ್ತೇವೆ ಎಂದರು. ಸಾಹಿತಿ ಪ್ರೊ.ಬಿ.ಕೆ. ಮಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಕ್ಕಳ ತಜ್ಞ ಡಾ. ನಿಂಗಾರೆಡ್ಡಿ ತಿರಕಣ್ಣನವರ, ಮಹಾಂತೇಶ ಸೋಮನಕಟ್ಟಿ, ವೀರೇಶ ವಣೂರ, ಅವಿನಾಶ ಮತ್ತಿಕಟ್ಟಿ, ಸರಸ್ವತಿ ಬುಟ್ಟಾನವರ, ಸಹನಾ ಕೊಟಗಿ, ಅಮರಯ್ಯ ಗೌರಿಮಠ, ಮಹಾಂತೇಶ ಪವಾರ, ಮಂಜುನಾಥ ಚಿತ್ರಗಾರ, ನಿಂಗಪ್ಪ ಮಾಸ್ತಿ ಇತರರಿದ್ದರು. 100ಕ್ಕೂ ಅಧಿಕ ಮಕ್ಕಳು ಶಿಬಿರದ ಪ್ರಯೋಜನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net