

ಹುಬ್ಬಳ್ಳಿ : ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಒದಗಿಸಿರುವ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಲ್ದಾಣದಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ, ಆವರಣದ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾದ ‘ಮಾರ್ಗದರ್ಶಕ’ ಪ್ರಯಾಣಿಕರ ಸ್ವಯಂ ಡಿಜಿಟಲ್ ದಿಕ್ಸೂಚಿ ಆಪರೇಟಿಂಗ್ ಫಲಕವನ್ನು ವೀಕ್ಷಿಸಿ, ಅದರ ಕಾರ್ಯನಿವರ್ಹಣೆ ಬಗ್ಗೆ ತಿಳಿದು ಮತ್ತು ಇದರಿಂದ ಪ್ರಯಾಣಿಕರಿಗೆ ಆಗುವ ಸದುಪಯೋಗದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಲ್ದಾಣದಲ್ಲಿನ ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಗೆ ಭೇಟಿ ನೀಡಿ, ಮಾರಾಟದ ಉತ್ಪನಗಳ ಕುರಿತು ಮಾಹಿತಿ ಪಡೆದರು. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ನಿಲ್ದಾಣ ಪೂರಕ ವೇದಿಕೆ ಕಲ್ಪಿಸಿ, ಸಣ್ಣ ಉದ್ಯಮಗಳ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಹೇಳಿದರು.
ಲಗೇಜ್ ರೂಮ್ ನಿಲ್ದಾಣ ನಿರೀಕ್ಷಕರ ಕಚೇರಿ, ನಿಲ್ದಾಣದ ವಾಣಿಜ್ಯ ವ್ಯವಸ್ಥಾಪಕರ ಕಚೇರಿ, ಟಿಕೆಟ್ ಕೌಂಟರ್, ರೈಲ್ವೆ ಪ್ಲಾಟ್ಫಾಮರ್್ಗಳ ಪರಿವೀಕ್ಷಣೆ ನಡೆಸಿದರು. ನಿಲ್ದಾಣದಲ್ಲಿನ ನೈರ್ಮಲ್ಯ ಹಾಗೂ ಸ್ವಚ್ಛತೆಯ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಬಳಿಕ ಅವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಅವರು ರೈಲಿನಲ್ಲಿನ ಬೋಗಿಗಳ ಪರಿವೀಕ್ಷಣೆ ನಡೆಸಿದರು. ಪ್ರಯಾಣಿಕರೊಂದಿಗೆ ಸಂವಾದ ನಡೆಸಿ, ರೈಲಿನಲ್ಲಿ ದೊರೆಯುವ ಆಹಾರ, ಉಪಚಾರ ಹಾಗೂ ಸ್ವಚ್ಛತೆ ನಿವರ್ಹಣೆ ಕುರಿತು ಪ್ರಯಾಣಿಕರಿಂದ ದೊರೆತ ಪ್ರತಿಕ್ರಿಯೆಗೆ ಹರ್ಷ ವ್ಯಕ್ತಪಡಿಸಿದರು.
ನೈಋತ್ಯ ರೈಲ್ವೆ ವಲಯದ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ .ಶಾಸ್ತ್ರಿ, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ ದಯಾನಂದ ಸಾಧು, ಹಿರಿಯ ವಿಭಾಗೀಯ ರೈಲ್ವೆ ವಾಣಿಜ್ಯ ವ್ಯವಸ್ಥಾಪಕ ಸಂತೋಷ ಹೆಗಡೆ, ವಿಭಾಗೀಯ ರೈಲ್ವೆ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ಹಾಗೂ ಇತರರು ಇದ್ದರು.