

ಮೈಸೂರು: ಸರ್ಕಾರ ಮಾಡುವ ಕೆಲಸವನ್ನು ಸಂಘ, ಸಂಸ್ಥೆಗಳ ಮಾಡುವ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದು ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸನ್ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಹೂಟಗಳ್ಳಿಯಲ್ಲಿರುವ ಪಿಜಿಆರ್‌ಎಸ್‌ಎಸ್ ಸಂಸ್ಥೆಯಲ್ಲಿ ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತ ಸೇವಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಆಷಾಢ ಮಾಸದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಘ, ಸಂಸ್ಥೆಗಳು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ನೀಡುತಲಿರುವುದು ಸ್ವಾಗತಾರ್ಗ. ಪಿಜಿಆರ್‌ಎಸ್‌ಎಸ್ ಸಂಸ್ಥೆಯು ತನ್ನದೇ ಆದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹರೀಶ ಯಾದವ್ ಮಾತನಾಡಿ, ಪಿಜಿಆರ್‌ಎಸ್‌ಎಸ ಸಂಸ್ಥೆಯು ಕಳೆದ ನಾಲ್ಕು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದಕ್ಕೆ ಎಲ್ಲರ ಬೆಂಬಲ ಬೇಕು ಎಂದು ಕೋರಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ. ರವೀಂದ್ರ, ಉಪಾಧ್ಯಕ್ಷ ಸತೀಶ್, ಗೌರವಾಧ್ಯಕ್ಷೆ ಎ.ಸವಿತಾ, ಸಹ ಕಾರ್ಯದರ್ಶಿ ಪಲ್ಲವಿ, ರಾಜ್ಯ ಸಂಚಾಲಕ ಮಂಜು, ಸಂಘಟನಾ ಕಾರ್ಯದರ್ಶಿ ಝನ್ಸಿರಾಣಿ, ಖಜಾಂಚಿ ಮಂಜುಳಾ, ಪತ್ರಕರ್ತರಾದ ಮನೋಹರ್, ಸಹನಾಗೌಡ ಇತರರು ಇದ್ದರು.