ರೈತರಿಗೆ ಗೌರವ ಸಲ್ಲಿಸಲು ರಕ್ತದಾನ ಶಿಬಿರ ಆಯೋಜನೆಗೆ ಮೆಚ್ಚುಗೆ

16M.D.R.11
79ನೇ ಸ್ವಾತಂತ್ರ್ಯೋತ್ಸದ ಅಂಗವಾಗಿ ಮದ್ದೂರು ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಕೆ.ಎಂ.ಉದಯ್ ಚಾಲನೆ ನೀಡಿದರು. ಸಿ.ಅಪೂರ್ವಚಂದ್ರ, ನಾರಾಯಣ್, ಶಿವಪ್ರಸಾದ್, ಶ್ರೀನಿವಾಸ್, ರಾಘವ, ಎಂ.ಆರ್.ಚಕ್ರಪಾಣಿ, ಎಂ.ಪಿ.ವೆಂಕಟೇಶ್, ಸಿ.ಹರೀಶ್, ಚಾಮನಹಳ್ಳಿ ಮಂಜು ಇದ್ದರು.
Published on

ಮದ್ದೂರು: ಭೂಮಿಪುತ್ರ ರೈತನಿಗೆ ಗೌರವ ಸಲ್ಲಿಸಬೇಕೆಂಬ ಕಾರಣಕ್ಕೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ರೈತ ರಕ್ತದಾನ ಶಿಬಿರ ಆಯೋಜಿಸಿರುವುದು ಮೆಚ್ಚುಗೆಯ ವಿಷಯ ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

79ನೇ ಸ್ವಾತಂತ್ರ್ಯೋತ್ಸದ ಅಂಗವಾಗಿ ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಂಡ್ಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡವರು ಹಾಗೂ ಗ್ರಾಮೀಣ ಜನರ ರಕ್ತದ ಅವಶ್ಯಕತೆಗಾಗಿ ರಕ್ತದಾನ ಶಿಬಿರ ಆಯೋಜಿಸಿರುವುದರಿಂದ ರೋಗಿಗಳಿಗೆ ಅನುಕೂಲವಾಗಲಿದೆ. ಆರೋಗ್ಯವಂತರು ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಸಂಕಷ್ಟದಲ್ಲಿರುವ ಜೀವಗಳನ್ನು ಉಳಿಸಬೇಕೆಂದು ಮನವಿ ಮಾಡಿದರು.

ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷೆ ವೀರಾಶಿವಲಿಂಗಯ್ಯ ಮಾತನಾಡಿ, ಪ್ರಪಂಚದಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೆ ಯಾವುದು ಇಲ್ಲ. ಅಪಘಾತ, ತುರ್ತು ಸಂದರ್ಭ, ಶಸ್ತ್ರ ಚಿಕಿತ್ಸೆ ಸೇರಿದಂತೆ ಇನ್ನಿತರ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ರಕ್ತ ಅತಿ ಮುಖ್ಯವಾಗಿದೆ. ಇದನ್ನರಿತು ವಿವಿಧ ಸಂಘಟನೆಗಳು ಬೃಹತ್ ರಕ್ತದಾನ ಶಿಬಿರವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡಿರುವುದು ಹರ್ಷ ತಂದಿದೆ ಎಂದರು.

ಶಿಬಿರದಲ್ಲಿ 175 ಯೂನಿಟ್ ರಕ್ತ ಸಂಗ್ರಹವಾಯಿತು. ಪ್ರಾಂಶುಪಾಲ ನಾರಾಯಣ್, ವಕೀಲರಾದ ಪೂರ್ಣಿಮಾ ಶ್ರೀಕಾಂತ್, ಪರಮೇಶ್ವರಯ್ಯ, ಆದರ್ಶ, ರೋಟರಿ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್, ಸುಮುಖ ನಿಧಿ ಲಿಮಿಟೆಡ್‌ನ ಅಧ್ಯಕ್ಷ ಕೆ.ಆರ್.ಕುಮಾರ್ ಕುಂದನಕುಪ್ಪೆ, ಇನ್ನರ್‌ವ್ಹೀಲ್ ಅಧ್ಯಕ್ಷೆ ಎಂ.ಸಿ.ಶ್ವೇತಾ ಶಶಿಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಮಾನಸ ವಿದ್ಯಾಸಂಸ್ಥೆ ಅಧ್ಯಕ್ಷ ವಿ.ಕೆ.ಜಗದೀಶ್, ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಶಿವಪ್ಪ, ಡಿಎಸ್‌ಎಸ್ ರಾಜ್ಯ ಸಂಚಾಲಕ ಅಂದಾನಿ, ಮುಖಂಡರಾದ ಕೆ.ಎಂ.ರವಿ, ತೈಲೂರು ಸಿದ್ದರಾಜು, ತೈಲೂರು ಆನಂದಾಚಾರಿ, ರಕ್ತದಾನ ಶಿಬಿರ ಆಯೋಜಕರಾದ ನವೀನ, ಗಣೇಶ್, ಶಿವಪ್ರಸಾದ್, ಟಿ.ವೆಂಕಟೇಶ್, ರಾಜೇಶ್, ತಿಲಕ್, ಮಹೇಶ್, ನರಸಿಂಹಮೂರ್ತಿ, ಪತ್ರಕರ್ತರಾದ ಎಂ.ಆರ್.ಚಕ್ರಪಾಣಿ, ಎಂ.ಪಿ.ವೆಂಕಟೇಶ್, ಎಸ್.ಪುಟ್ಟಸ್ವಾಮಿ, ಸಿ.ಹರೀಶ್, ಕೃಷ್ಣ, ವಿ.ಎಸ್.ಪ್ರಭು, ಚಾಮನಹಳ್ಳಿ ಮಂಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net