ಕೆಎಲ್​ಇ ಶಿಕ್ಷಣ ಮಹಾವಿದ್ಯಾಲಯದ ಕಿರುಚಿತ್ರಕ್ಕೆ ಶ್ಲಾಘನೆ

KLE College Programme
Published on

ಅಂಕೋಲಾ: ಮಾನವನ ಜೀವನ ಕಷ್ಠ ಕಾರ್ಪಣ್ಯಗಳಿಂದ ಕೂಡಿದ್ದು ಅದನ್ನು ಎದುರಿಸುವ ಶಕ್ತಿ ಸವಾಲಿನಿಂದ ಕೂಡಿದೆ. ಅದನ್ನು ಜಯಿಸುವಲ್ಲಿ ಹೋರಾಟ ಮಾಡಬೇಕಾಗಿದೆ. ಅದನ್ನು ಸಾರುವ ಕಿರುಚಿತ್ರವನ್ನು ರೂಪಿಸಿರುವ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಪ್ರಯತ್ನ ಅರ್ಥಪೂರ್ಣವಾಗಿದೆ ಎಂದು ನಾಟಿ ವೈದ್ಯ ಹನುಮಂತ ಗೌಡ ಹೇಳಿದರು.

ಇಲ್ಲಿಯ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಿರ್ವಿುಸಿ, ನಿರ್ದೇಶಿಸಿರುವ ಹೆಜ್ಜೆಗುರುತು ಹಾಗೂ ಸರ್ವಮಯಿ ಕಿರುಚಿತ್ರವನ್ನು ವೀಕ್ಷಿಸಿ ಅದರಲ್ಲಿ ನಟಿಸಿದ ಎಲ್ಲ ಕಲಾವಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.</p><p>ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಅಧ್ಯಕ್ಷತೆವಹಿಸಿದ್ದರು.

ಪೂಜಾ ಭಟ್ಟ ಪ್ರಾರ್ಥಿಸಿದರು. ದೀಪಿಕಾ ನಾಯಕ ಸ್ವಾಗತಿಸಿದರು. ವೇದಿಕೆಯಲ್ಲಿ ಎನ್.ಎಸ್.ಎಸ್. ಅಧಿ ಕಾರಿಗಳಾದ ರಾಘವೇಂದ್ರ ಅಂಕೋಲೆಕರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ನಿವೃತ್ತ ಶಿಕ್ಷಕ ವೆಂಟು ನಾಯಕ ಶುಭ ಹಾರೈಸಿದರು. ಪವನಾ ನಾಯ್ಕ, ಕ್ಷಮಾ ನಾಯ್ಕ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net