

ಹುಬ್ಬಳ್ಳಿ: ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ನಡೆಯುತ್ತಿರುವ ಹೇರ್ ಕಲರಿಂಗ್ ಅಭಿಯಾನಕ್ಕೆ ಹುಬ್ಬಳ್ಳಿಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ನವನಗರದ ಅಂಚೆ ಕಚೇರಿ ಹತ್ತಿರದ ಈಶ್ವರ ದೇವಸ್ಥಾನದ ಬಳಿ ಶನಿವಾರ ಸಾರ್ವಜನಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು.
ಕಂಪನಿಯ ಪರಿಣತರು, ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿಸಿದರು. ಪರಿಣತರ ಹೇರ್ ಕಲರಿಂಗ್ ಕೈಚಳಕಕ್ಕೆ ಮಹಿಳೆಯರು ಬೆರಗಾದರು. ಮೇ 26ರಂದು ಸಹ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನವನಗರದ ಅಂಚೆ ಕಚೇರಿ ಹತ್ತಿರದ ಈಶ್ವರ ದೇವಸ್ಥಾನದ ಬಳಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೊಬೈಲ್ ಫೋನ್ ತಂದು ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು ಈ ಅಭಿಯಾನದ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.