

ಹುಬ್ಬಳ್ಳಿ : ಪ್ರತಿಷ್ಠಿತ ಗಾರ್ನಿಯರ್ ಕಂಪನಿಯಿಂದ ಇಲ್ಲಿನ ಭೈರಿದೇವರಕೊಪ್ಪದ ಮೈಲಾರಲಿಂಗೇಶ್ವರ ದೇವಸ್ಥಾನ ಬಳಿಯ ರೇಣುಕಾ ನಗರದಲ್ಲಿ ಬುಧವಾರ ಹೇರ್ ಕಲರಿಂಗ್ ಅಭಿಯಾನ ನಡೆಯಿತು.
ಸಾರ್ವಜನಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಂಡರು. ಹೇರ್ ಕಲರಿಂಗ್ ಅಭಿಯಾನದ ಕುರಿತು ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಂಪನಿಯ ಪರಿಣಿತರು ಮಹಿಳೆಯರಿಗೆ ಇಷ್ಟವಾದ ಬಣ್ಣದ ಡೈ ಮಾಡಿಸಿದರು.
ಮೇ 30ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಸಾಯಿನಗರ ಓಂನಗರದ ವಾಯಪುತ್ರ ಬಡಾವಣೆಯ ಚಿಕ್ಕಮಠಶಾಲೆ ಬಳಿಯ ಚನ್ನಬಸಪ್ಪ ಧಾರವಾಡ ಶೆಟ್ಟರ್ ನಿವಾಸದಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ನಡೆಯಲಿದೆ. ಸಾರ್ವಜನಿಕರಿಗೆ ಹೇರ್ ಕಲರಿಂಗ್ ಉಚಿತವಾಗಿದ್ದು, ಕಡ್ಡಾಯವಾಗಿ ಮೋಬೈಲ್ ಫೋನ್ ತಂದು ಒಟಿಪಿ ಆಧಾರಿತ ನೋಂದಣಿ ಮಾಡಿಸಿಕೊಂಡು, ಅಭಿಯಾನದ ಪ್ರಯೋಜನ ಪಡೆಯಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿಳಾಸ : ಚನ್ನಬಸಪ್ಪ ಧಾರವಾಡಶೆಟ್ಟರ್ ನಿವಾಸ, ಚಿಕ್ಕಮಠ ಶಾಲೆ ಹತ್ತಿರ, ವಾಯುಪುತ್ರ ಬಡಾವಣೆ, ಓಂ ನಗರ, ಸಾಯಿನಗರ, ಹುಬ್ಬಳ್ಳಿ .
ಮೊ: 8884432660