

ವಿಜಯಪುರ: ಜಿಲ್ಲೆಯಾದ್ಯಂತ ಸೆ. 7 ರಿಂದ ಗಣೇಶ ಚತುರ್ಥಿ ಹಬ್ಬ ಆಚರಣೆ ಹಿನ್ನೆಲೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಕಾಲಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ಅಹಿತಕರ ಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ವಿಶೇಷ ದಂಡಾಧಿಕಾರಿ ನೇಮಿಸಿ ಜಿಲ್ಲೆಯ ಎಲ್ಲ ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯನಿರ್ವಹಿಸುವಂತೆ ಜಿಲ್ಲಾ ದಂಡಾಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶಿಸಿದ್ದಾರೆ.
ವಿಜಯಪುರ ಉಪ ವಿಭಾಗಕ್ಕೆ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ (ಮೊ. 9599909724), ಇಂಡಿ ಉಪವಿಭಾಗಕ್ಕೆ ಇಂಡಿ ಉಪ ವಿಭಾಗಾಧಿಕಾರಿ ಆಬೀದ ಗದ್ಯಾಳ (ಮೊ. 9008690039) ಅವರನ್ನು ವಿಶೇಷ ದಂಡಾಧಿಕಾರಿಗಳಾಗಿ ನಿಯೋಜಿಸಿ ಆದೇಶಿಸಲಾಗಿದೆ ಮದು ಅವರು ತಿಳಿಸಿದ್ದಾರೆ.
ಸೆ. 7 ರಂದು ಪ್ರತಿಷ್ಠಾಪನೆ ದಿನ ಹಾಗೂ ಸೆ. 11, ಸೆ. 13, ಸೆ. 15 ಹಾಗೂ ಸೆ. 17 ರವರೆಗೆ ವಿಸರ್ಜನೆ ಕಾಲಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ (ಮೊ. 9448692358) ಅವರನ್ನು ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 1 ರಿಂದ 17 ರವರೆಗೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಈರಣ್ಣ ಆಶಾಪೂರ (ಮೊ. 9731042063) ಅವರನ್ನು ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 18 ರಿಂದ 35 ರವರೆಗೆ ಹಾಗೂ ಪ್ರಭಾರ ತಹಸೀಲ್ದಾರ, ಕಾರ್ಯನಿರ್ವಾಹಕ ದಂಡಾಧಿಕಾರಿಗಳಾದ ಎಸ್.ಎಚ್. ಅರಕೇರಿ ಅವರನ್ನು ತಿಕೋಟಾ ತಾಲೂಕಿಗೆ ನಿಯೋಜಿಸಲಾಗಿದೆ.
ವಿಜಯಪುರ ತಾಲೂಕಿಗೆ ತಹಸೀಲ್ದಾರ ಪಿ.ಎಸ್. ಚನಗೊಂಡ (ಮೊ. 9482896370), ಇಂಡಿ ತಾಲೂಕಿಗೆ ತಹಸೀಲ್ದಾರ ಬಿ.ಎಸ್. ಕಡಕಭಾವಿ (ಮೊ. 9902748240), ಬಸವನಬಾಗೇವಾಡಿ ತಾಲೂಕಿಗೆ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ (ಮೊ. 9008712765), ಮುದ್ದೇಬಿಹಾಳ ತಾಲೂಕಿಗೆ ತಹಸೀಲ್ದಾರ ಬಲರಾಮ್ ಕಟ್ಟಿಮನಿ (ಮೊ. 9538284426), ಸಿಂದಗಿ ತಾಲೂಕಿಗೆ ತಹಸೀಲ್ದಾರ ಪ್ರದಿಪ ಹಿರೇಮಠ (ಮೊ. 8073688515) ಹಾಗೂ ಬಬಲೇಶ್ವರ ತಾಲೂಕಿಗೆ ತಹಸೀಲ್ದಾರ ಎಂ.ಎಸ್. ಅರಕೇರಿ (ಮೊ. 9538385106) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಕೊಲ್ಹಾರ ತಾಲೂಕಿಗೆ ತಹಸೇಲ್ದಾರ ಎಸ್.ಎಸ್. ನಾಯಕಲಮಠ (ಮೊ. 9611101379), ನಿಡಗುಂದಿ ತಾಲೂಕಿಗೆ ತಹಸೀಲ್ದಾರ ಎ.ಡಿ. ಅಮರಾವದಗಿ (ಮೊ. 9482268533), ತಾಳಿಕೊಟೆ ತಾಲೂಕಿಗೆ ತಹಸೀಲ್ದಾರ ಕೀರ್ತಿ ಚಾಲಕ (ಮೊ. 8861438554), ದೇವರಹಿಪ್ಪರಗಿ ತಾಲೂಕಿಗೆ ತಹಸೀಲ್ದಾರ ಪ್ರಕಾಶ ಸಿಂದಗಿ (ಮೊ. 9945856274), ಆಲಮೇಲ ತಾಲೂಕಿಗೆ ತಹಸೀಲ್ದಾರ ಸುರೇಶ ಚಾವಲರ (ಮೊ:9449943022) ಮತ್ತು ಚಡಚಣ ತಾಲೂಕಿಗೆ ತಹಸೀಲ್ದಾರ ಎಸ್.ಬಿ. ಇಂಗಳೆ (ಮೊ. 9900776009) ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.