ಗೃಹಸಚಿವ ಜಿ. ಪರಮೇಶ್ವರ ಹೇಳಿಕೆ; ಸಿಇಎನ್ ಠಾಣೆಗಳಿಗೆ ಎಸ್‌ಪಿ ರ‍್ಯಾಂಕ್‌ನ ಅಧಿಕಾರಿ ನೇಮಕ

DSC_7831
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸೈಬರ್ ಅಪರಾಧಗಳು ಅಡೆತಡೆ ಇಲ್ಲದೆ ವಿಶ್ವವ್ಯಾಪಿಯÁಗಿವೆ. ದಿನೇದಿನೇ ಅಪರಾಧಗಳ ರೂಪುರೇಷೆಯೂ ಬದಲಾಗುತ್ತಿದೆ. ಅವುಗಳನ್ನು ತಡೆಗಟ್ಟಲು ಸದ್ಯ ಅಸ್ತಿತ್ವದಲ್ಲಿರುವ ಸೆನ್ ಠಾಣೆ (ಸೈಬರ್, ಆರ್ಥಿಕ ಹಾಗೂ ನಾರ್ಕೊಟಿಕ್ಸ್) ಠಾಣೆಗಳಿಗೆ ಎಸ್‌ಪಿ ರ‍್ಯಾಂಕ್‌ನ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ಗೃಹಸಚಿವ ಜಿ. ಪರಮೇಶ್ವರ ಹೇಳಿದರು.
ನಗರ ಹೊರವಲಯದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯಕ್ಕೆ (ಎನ್‌ಎಫ್‌ಎಸ್‌ಯು) ಶನಿವಾರ ಭೇಟಿ ನೀಡಿದ್ದ ಅವರು ವಿವಿಧ ವಿಭಾಗಗಳು ಹಾಗೂ ಪ್ರಯೋಗಾಲಯಗಳಿಗೆ ಭೇಟಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸೈಬರ್ ಅಪರಾಧಗಳ ತನಿಖೆಗೆ ಅಽಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಸದ್ಯ ರಾಜ್ಯಾದ್ಯಂತ 43 ಸಿಇಎನ್ ಪೊಲೀಸ್ ಠಾಣೆಗಳಿವೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಸ್ಥಾಪಿತವಾದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವು ಪೊಲೀಸ್ ಇಲಾಖೆಗೆ ಉಪಯುಕ್ತವಾಗಲಿದೆ ಎಂದರು.
ರಾಷ್ಟಿçÃಯ ವಿಽವಿಜ್ಞಾನ ವಿಶ್ವವಿದ್ಯಾಲಯದ ಖಾಯಂ ಕ್ಯಾಂಪಸ್ ಸ್ಥಾಪನೆಗೆ ನಗರದ ಪೆಪ್ಸಿ ಫ್ಯಾಕ್ಟರಿ ಪಕ್ಕದ ಕೃಷಿ ವಿಶ್ವವಿದ್ಯಾಲಯದ 41 ಎಕರೆ ಜಾಗ ನೀಡಲಾಗಿದೆ. ಸುಮಾರು 120 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕ್ಯಾಂಪಸ್ ನಿರ್ಮಾಣವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net