ಜಗದೀಶ ಹೊಂಬಳಿ ಧಾರವಾಡ
ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಜಿಲ್ಲೆಯ ದಿಗ್ಗಜರ ಐದು ಟ್ರಸ್ಟ್‌ಗಳಿಗೆ ಹೊಸ ಅಧ್ಯಕ್ಷ, ಸದಸ್ಯರ ನೇಮಕವನ್ನು ಕೊನೆಗೂ ಸರ್ಕಾರ ಮಾಡಿದೆ.
ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಧಾರವಾಡದ ಪಂ.ಎಂ.ವೆಂಕಟೇಶಕುಮಾರ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿದೆ. ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಬೆಳಗಾವಿಯ ಡಾ. ಸರಜೂ ಕಾಟ್ಕರ್, ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಧಾರವಾಡದ ಪಂ.ಕೈವಲ್ಯಕುಮಾರ ಗುರವ, ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಧಾರವಾಡದ ರಂಜಾನ ದರ್ಗಾ, ಚಿತ್ರಕಲಾ ಶಿಲ್ಪಿ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಧಾರವಾಡದ ಬಿ.ಮಾರುತಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸರ್ಕಾರ ನೇಮಿಸಿದೆ.
ಒಂದೂವರೆ ವರ್ಷದ ಹಿಂದೆ ಎಂ.ಎಂ.ಕಲಬುರ್ಗಿ ಸ್ಮಾರಕ ಟ್ರಸ್ಟ್ ರಚನೆಯಾಗಿದ್ದು, ಅಂದಿನಿಂದ ವೀರಣ್ಣ ರಾಜೂರು ಅವರು ಅಧ್ಯಕ್ಷರಾಗಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಐದು ಟ್ರಸ್ಟ್‌ಗಳಿಗೆ ಹೊಸ ಅಧ್ಯಕ್ಷ, ಸದಸ್ಯರನ್ನು ನೇಮಿಸಿದ್ದು ಬಹಿರಂಗಗೊಂಡಿತ್ತು. ಆದರೆ, ಇದಕ್ಕೆ ಕೆಲವರ ವಿರೋಧ ವ್ಯಕ್ತವಾಗಿತ್ತು. ಬಳಿಕ ನೇಮಕಗೊಂಡ ಕೆಲವರು ಅಧ್ಯಕ್ಷ-ಸದಸ್ಯರಾಗುವುದಕ್ಕೆ ನಿರಾಕರಿಸಿದ್ದರು. ಪಟ್ಟಿಯಲ್ಲಿನ ಕೆಲ ಸದಸ್ಯರೂ ಮೃತಪಟ್ಟಿದ್ದರು. ಹೀಗಾಗಿ ಸರ್ಕಾರ ಅಂದು ಹೊಸಬರ ನೇಮಕ ಮಾಡುವುದನ್ನು ಕೈ ಬಿಟ್ಟಿತ್ತು. ಈಗ ದಶಕಗಳಿಗೂ ಹೆಚ್ಚು ಕಾಲ ಇದ್ದ ಅಧ್ಯಕ್ಷರನ್ನು ಬದಲಿಸಿ, ಹೊಸಬರ ನೇಮಕ ಮಾಡಲಾಗಿದೆ. ಸರ್ಕಾರ ಇನ್ನು ಮುಂದೆ ಈ ಎಲ್ಲ ಟ್ರಸ್ಟ್‌ಗಳಿಗೆ ಮೂರು ವರ್ಷಗಳಿಗೊಮ್ಮೆ ಹೊಸ ಅಧ್ಯಕ್ಷ, ಸದಸ್ಯರನ್ನು ನೇಮಿಸಿಕೊಳ್ಳುವುದಕ್ಕೆ ನಿಯಮ ರೂಪಿಸಿದೆ.
ಈ ಹಿಂದೆ ಯಾರು ಎಷ್ಟು ವರ್ಷವಿದ್ದರು?
ಅಧ್ಯಕ್ಷ-ಸದಸ್ಯರ ನೇಮಕಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಿಯಮಗಳೇ ಇರಲಿಲ್ಲ. ಹೀಗಾಗಿ ಒಬ್ಬರೇ ದಶಕಗಳ ಕಾಲ ಅಧ್ಯಕ್ಷರಾಗಿದ್ದರು. ಒಂದೆರಡು ಟ್ರಸ್ಟ್‌ಗಳ ಚಟುವಟಿಕೆಗಳು ನಿಂತ ನೀರಾಗಿದ್ದವು. ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ 25 ವರ್ಷದಿಂದ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿದ್ದರು.
ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳು ಕ್ರಮವಾಗಿ 15, 13 ವರ್ಷಗಳ ಹಿಂದೆ ಆರಂಭವಾಗಿವೆ. ಆರಂಭದಿಂದಲೂ ಚಂದ್ರಕಾಂತ ಬೆಲ್ಲದ ಅಧ್ಯಕ್ಷರಾಗಿದ್ದರು. ಅಧ್ಯಕ್ಷರು, ಸದಸ್ಯರ ಬದಲಾವಣೆ ಆಗಿರಲಿಲ್ಲ. ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ 13 ವರ್ಷದ ಹಿಂದೆ ಆರಂಭವಾಗಿದೆ. ಶ್ರೀನಿವಾಸ ರಿತ್ತಿ ಅವರು 2018ರವರೆಗೆ ಅಧ್ಯಕ್ಷರಿದ್ದರು. ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಪ್ರಮೋದ ಗಾಯಿ ಅವರು ಪ್ರಭಾರಿ ಅಧ್ಯಕ್ಷರಾಗಿದ್ದರು.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆರಂಭವಾದಾಗ ಕನ್ನಡ ಮತ್ತು ಸಂಸ್ಕೃತಿ ಸಚಿವರು ಅಧ್ಯಕ್ಷರಾಗಿದ್ದರು. ಜಿಲ್ಲಾಧಿಕಾರಿ ಅವರು ಸದಸ್ಯ ಕಾರ್ಯದರ್ಶಿಯಾಗಿದ್ದರು. ನಂತರದಲ್ಲಿ ಎಂ.ಎಂ.ಕಲಬುರ್ಗಿ ಅವರು, ತದನಂತರ ಶ್ಯಾಮಸುಂದರ ಬಿದರಗುಂದಿ ಅಧ್ಯಕ್ಷರಾಗಿದ್ದರು. 2017ರಿಂದ ಡಿ.ಎಂ.ಹಿರೇಮಠ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಟ್ರಸ್ಟ್‌ಗೆ ಹೊಸ ಸದಸ್ಯರು
ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಸದಸ್ಯರಾಗಿ ಡಾ.ಶಕ್ತಿ ಪಾಟೀಲ, ಉಸ್ತಾದ ಶಫಿಕ್‌ಖಾನ್, ಡಾ.ಪರಶುರಾಮ ಸಂಗಾವಿ, ಡಾ.ಚಂದ್ರಿಕಾ ಕಾಮತ, ಯಾದವೇಂದ್ರ ಪೂಜಾರ, ಅಕ್ಕಮಹಾದೇವಿ ಆಲೂರು, ಗುರುಪ್ರಸಾದ ಹೆಗಡೆ ಸದಸ್ಯರಾಗಿದ್ದಾರೆ.
ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಡಾ.ವೈ.ಎಂ.ಯಾಕೊಳ್ಳಿ, ಡಾ.ಅಶೋಕ ಶೆಟ್ಟರ್, ಶ್ರೀಲಾಧರ ಮುಗಳಿ, ಡಾ.ಶರಣಮ್ಮ ಗೊರೆಬಾಳ, ಪ್ರಭು ಕುಂದರಗಿ, ಪುನರ್ವಸು ಬೇಂದ್ರೆ, ಇಮಾಮ್‌ಸಾಬ್ ವಲ್ಲೆಪ್ಪನವರ ಸದಸ್ಯರಾಗಿದ್ದಾರೆ.
ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಪಂ.ಸಾತಲಿಂಗಪ್ಪ ದೇಸಾಯಿ, ನಿಜಗುಣಿ ರಾಜಗುರು, ಛೋಟೆ ರೆಹಿಮತ್ ಖಾನ್, ಡಾ.ಅಶೋಕ ಹುಗ್ಗಣ್ಣವರ, ಅನಿಲ್ ಮೇತ್ರಿ, ಅಲ್ಲಮಪ್ರಭು ಕಡಕೋಳ, ಸುಪ್ರಿಯಾ ಭಟ್ ಸದಸ್ಯರಾಗಿದ್ದಾರೆ.
ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಡಾ.ದೀಪಕ ಆಲೂರು, ವಿಶ್ವನಾಥ ಕುಲಕರ್ಣಿ, ಡಾ.ಸಿ.ಯು.ಬೆಳ್ಳಕ್ಕಿ, ಡಾ.ಪ್ರಕಾಶ ಉಡಕೇರಿ, ದ್ರೌಪದಿ ವಿಜಾಪುರ, ಬಸವರಾಜ ಸೂಳೆಭಾವಿ, ಸುನಂದಾ ಕಡಮೆ ಸದಸ್ಯರಾಗಿದ್ದಾರೆ.
ಡಿ.ವಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಸುರೇಶ ಹಾಲಭಾವಿ, ಎ್.ವಿ.ಚಿಕ್ಕಮಠ, ಡಿ.ಎಂ.ಬಡಿಗೇರ, ಡಾ.ಬಿ.ಎಲ್.ಚವ್ಹಾಣ, ಡಾ.ಬಿ.ಎಚ್.ಕುರಿಯವರ, ಎಸ್.ಕೆ.ಪತ್ತಾರ, ರೇಣುಕಾ ಮಾರ್ಕಂಡೆಯ ಸದಸ್ಯರಾಗಿದ್ದಾರೆ. ಎಲ್ಲ ಟ್ರಸ್ಟ್‌ಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.