ಅಂಬೇಡ್ಕರ್ ಸೇನೆಗೆ ಪದಾಧಿಕಾರಿಗಳ ನೇಮಕ

24Kush02 (1)
ಕುಶಾಲನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಟಿ.ಆರ್.ಸತೀಶ್ ಅವರನ್ನು ಸನ್ಮಾನಿಸಲಾಯಿತು. ಸಾಗರ್, ಮಂಜು, ಸಿದ್ದರಾಜು, ಶಿವಣ್ಣ, ನಾಗರಾಜು, ಅನೀಶ್, ದೇವಯ್ಯ, ರವಿ, ಸಂಜು ಇದ್ದರು.
Published on

ಕುಶಾಲನಗರ: ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ವತಿಯಿಂದ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಇಲ್ಲಿನ ಟಾಪ್ ಇನ್ ಟೌನ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಟಿ.ಆರ್.ಸತೀಶ್, ಅಂಬೇಡ್ಕರ್ ಸೇನೆ ಎಲ್ಲ ಜಿಲ್ಲೆಗಳಲ್ಲೂ ಸಂಘಟಿತವಾಗಿದ್ದು ಶಿಕ್ಷಣ, ಸಂಘಟನೆ ಮತ್ತು ಹೋರಾಟಕ್ಕೆ ಪ್ರಥಮ ಆದ್ಯತೆ ನೀಡುತ್ತಿದೆ ಎಂದರು.

ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಸಾಗರ್ ಕೂಡಿಗೆ, ತಾಲೂಕು ಉಪಾಧ್ಯಕ್ಷರಾಗಿ ಕೂಡಮಂಗಳೂರು ಚೆಲುವರಾಜು, ಕಾರ್ಯದರ್ಶಿಯಾಗಿ ಆರನೇ ಹೊಸಕೋಟೆ ಶಶಿಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಆರನೇ ಹೊಸಕೋಟೆ ರಾಕೇಶ್ ಅವರನ್ನು ನೇಮಿಸಲಾಯಿತು.

ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಜಿ , ಮುಖಂಡರಾದ ಶಿವಣ್ಣ, ನಾಗರಾಜು. ಎಂ.ಅನೀಶ್, ದೇವಯ್ಯ, ರವಿ, ಸಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net