

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಿಯ ಸಮಾನ ಮನಸ್ಕರು ಸಂಘಟಿಸಿರುವ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ಟ್ ಬುಧವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ಡಾ. ಅಜಿತ ಪ್ರಸಾದ (ಗೌರವ ಅಧ್ಯಕ್ಷರು), ಡಾ. ಜಿನದತ್ತ ಹಡಗಲಿ (ಅಧ್ಯಕ್ಷರು), ಡಾ. ಭರಮಪ್ಪ ಭಾವಿ (ಉಪಾಧ್ಯಕ್ಷರು), ಶಾಂತಿನಾಥ ಹೋತಪೇಟಿ (ಪ್ರಧಾನ ಕಾರ್ಯದರ್ಶಿ ), ಶಾಂತರಾಜ ಮಲ್ಲಸಮುದ್ರ (ಕಾರ್ಯದರ್ಶಿ ), ಮಂಜುನಾಥ ಚವಡಣ್ಣವರ (ಖಜಾಂಚಿ ), ಧರಣೇಂದ್ರ ಜವಳಿ, ರಾಯಪ್ಪ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಶ್ರೀಧರ ಬಸ್ತಿ, ಪ್ರತಿಭಾ ಕಾಗೆ, ತನುಜಾ ರೋಖಡೆ (ಕಾರ್ಯಕಾರಿಣಿ ಸದಸ್ಯರು) ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.