

ಸುಂಟಿಕೊಪ್ಪ: ಸೋಶಿಯಲ್ ಡೆಮೊಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಸುಂಟಿಕೊಪ್ಪ ನಗರ ಸಮಿತಿ ಅಧ್ಯಕ್ಷರಾಗಿ ಎಸ್.ಎಫ್.ಫಿರೋಜ್‌ಖಾನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎ.ನೌಶದ್ ಅವರನ್ನು ನೇಮಕಗೊಳಿಸಲಾಯಿತು.
ಸುಂಟಿಕೊಪ್ಪ ದ್ವಾರಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್‌ಡಿಟಿಯು ಜಿಲ್ಲಾಧ್ಯಕ್ಷರ ಅಣ್ಣಾ ಶರೀಫ್ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಸುಂಟಿಕೊಪ್ಪ ನಗರ ಸಮಿತಿ ರಚಿಸಲಾಗಿದ್ದು ಉಪಾಧ್ಯಕ್ಷರಾಗಿ ರಿಯಾಜ್ ಆರ್.ಎನ್, ಕಾರ್ಯದರ್ಶಿ ಎಸ್.ಸಲೀಂ, ಖಜಾಂಜಿಯಾಗಿ ಸಿಕಂದರ್ ಶರೀಫ್, ಸಮಿತಿ ಸದಸ್ಯರಾಗಿ ಸಲಾಂ, ಆರ್.ರಫೀಕ್, ಆಸೀಫ್ ಮತ್ತಿತರರನ್ನು ನೇಮಕಗೊಳಿಸಲಾಯಿತು. ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎ.ಲತೀಫ್ ಹಾಗೂ ಅಜೀಜ್ ಮತ್ತಿತರರು ಇದ್ದರು.