ಹಿಂದು ಜಾಗರಣ ವೇದಿಕೆಗೆ ಪದಾಧಿಕಾರಿಗಳ ನೇಮಕ

Appointment of office bearers for Hindu Jagran Forum
Published on

ಮಡಿಕೇರಿ:

ಹಿಂದು ಸಮಾಜದಲ್ಲಿ ಸಾಮಾಜಿಕ ಜಾಗೃತಿ, ಸುರಕ್ಷಿತ ಹಾಗೂ ಸಂಘಟಿತ ಹಿಂದು ಸಮಾಜ ನಿರ್ಮಾಣದ ಧ್ಯೇಯಕ್ಕಾಗಿ ಕಳೆದ 37 ವರ್ಷಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಹಿಂದು ಜಾಗರಣ ವೇದಿಕೆ ಆಂದೋಲನದ ಕೊಡಗು ಜಿಲ್ಲಾ ಸಂಯೋಜಕರಾಗಿ ಕುಕ್ಕೇರ ಅಜಿತ್ ಪುನಾರಾಯ್ಕೆಯಾಗಿದ್ದಾರೆ. ಜಿಲ್ಲಾ ಸಹ ಸಂಯೋಜಕರಾಗಿ ಸೋಮವಾರಪೇಟೆಯ ಬೋಜೇಗೌಡ, ಪೊನ್ನಂಪೇಟೆಯ ಶರತ್, ಮಡಿಕೇರಿ ಶಾಂತಿನಿಕೇತನ ಚೇತನ್, ಬಿಟ್ಟಂಗಾಲದ ಯೋಗೇಶ್ ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಕಪಿಲ್ ಮಡಿಕೇರಿ, ಕುಮಾರ್ ಮೇಕೇರಿ, ಶಾಂತೆಯAಡ ತಿಮ್ಮಯ್ಯ, ಹರೀಶ್ ಕುಶಾಲನಗರ, ಸುನೀಲ್ ಮಾದಾಪುರ, ವಿನಯ್ ಮಡಿಕೇರಿ, ರಾಜೀವ್ ಕುಶಾಲನಗರ, ಭವನ್ ಮೇಕೇರಿ ಅವರುಗಳನ್ನು ನೇಮಕ ಮಾಡಲಾಗಿದೆ.

ಮಡಿಕೇರಿ ತಾಲೂಕು ಸಂಯೋಜಕರಾಗಿ ದುರ್ಗೇಶ್, ವೀರಾಜಪೇಟೆ ತಾಲೂಕು ಸಂಯೋಜಕರಾಗಿ ರವೀಂದ್ರ, ಪೊನ್ನಂಪೇಟೆ ತಾಲೂಕು ಸಂಯೋಜಕರಾಗಿ ಸುಳ್ಳಿಮಾಡ ಸಂಪತ್, ಕುಶಾಲನಗರ ತಾಲೂಕು ಸಂಯೋಜಕರಾಗಿ ದಿನೇಶ್ ಅವರುಗಳನ್ನು ನೇಮಕ ಮಾಡಲಾಗಿದೆ.

ಇದರೊಂದಿಗೆ ಜಿಲ್ಲಾ ಸಮಿತಿ ಹಾಗೂ ಜಿಲ್ಲೆಯ 5 ತಾಲೂಕುಗಳಿಗೆ 80 ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಕುಶಾಲನಗರದಲ್ಲಿ ಭಾನುವಾರ ನಡೆದ ರಾಜ್ಯ ಪ್ರಮುಖರ ಬೈಠಕ್‌ನಲ್ಲಿ ನೂತನ ಜವಾಬ್ದಾರಿಗಳ ಘೋಷಣೆ ನಡೆಯಿತು ಎಂದು ಹಿಂಜಾವೇ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net