ಶಿಕ್ಷಣ ಸಂಸ್ಥೆಗೆ ಪದಾಧಿಕಾರಿಗಳ ನೇಮಕ

22 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದಲ್ಲಿ ಅರವತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಐತಿಹಾಸಿಕ ಶಿಕ್ಷಣ ಸಂಸ್ಥೆಗೆ ಇತ್ತೀಚೆಗೆ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಕಿಲ್ಲಾ ಬಳಿಯ ಭಾರತೀಯ ವಿದ್ಯಾ ಕೇಂದ್ರದ ಆಡಳಿತ ಮಂಡಳಿಗೆ ಮುಂದಿನ 3 ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜಯದೇವಿತಾಯಿ ಬಾಲಕಿಯರ ಪ್ರೌಢಶಾಲೆಯಲ್ಲಿ ಜರುಗಿತು. ಸಂಸ್ಥೆ ಅಧ್ಯಕ್ಷರಾಗಿ ಮಾಜಿ ಮಹಾಪೌರ ಈರೇಶ ಅಂಚಟಗೇರಿ, ಉಪಾಧ್ಯಕ್ಷರಾಗಿ ಎ.ಸಿ. ವಿರಕ್ತಮಠ, ಕಾರ್ಯಾಧ್ಯಕ್ಷರಾಗಿ ಹೋಟೆಲ ಉದ್ಯಮಿ ಮಹೇಶ ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾಗಿ ಪ್ರಭು ನಡಕಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದಯ್ಯ ಚಿಕ್ಕಮಠ, ಕೋಶಾಧ್ಯಕ್ಷರಾಗಿ ಜಿ.ಜಿ. ಸುಬ್ಬಾಪುರಮಠ, ಸಹ ಕಾರ್ಯದರ್ಶಿಯಾಗಿ ನಿಂಗಪ್ಪ ಕಾಶಪ್ಪನವರ ಆಯ್ಕೆಯಾದರು.

ಆಡಳಿತ ಮಂಡಳಿ ಸದಸ್ಯರಾಗಿ ಈರಣ್ಣ ಆಕಳವಾಡಿ, ಸುಭಾಸ ಸಜ್ಜನರ, ರೇವಣೇಶ ಆಲದಕಟ್ಟಿ, ಶಿವಾನಂದ ಹೂಗಾರ, ಮಂಜುನಾಥ ಹಗೇದಾರ, ಶಿವಯೋಗಿ ಅಮಿನಗಡ, ರವೀಂದ್ರ ಶೆಟ್ಟಿ, ಮಂಜುನಾಥ ಬಡಿಗೇರ, ಲಿಂಗರಾಜ ಅಂಗಡಿ ಆಯ್ಕೆಯಾದರು. ನೂತನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net