

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ- 71 ಮತಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಲದ ಎಸ್‌ಟಿ ಮೋರ್ಚಾಗೆ ವಿವಿಧ ಪದಾಧಿಕಾರಿಗಳ ನೇಮಕ ಇತ್ತೀಚೆಗೆ ನಡೆಯಿತು. ಕುರುಬಗಟ್ಟಿ ಗ್ರಾಮದ ಅಜ್ಜಪ್ಪ ಜಂಗಳಿ ಅವರನ್ನು ಅಧ್ಯಕ್ಷರನ್ನಾಗಿ, ಮಾರಡಗಿ ಗ್ರಾಮದ ಮಂಜುನಾಥ ಕಾಲವಾಡ ಹಾಗೂ ಅಮ್ಮಿನಭಾವಿ ಗ್ರಾಮದ ಮಂಜುನಾಥ ಕರಡಿಗುಡ್ಡ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ ಎಂದು ಮಂಡಲ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.