ಬಂಟ್ವಾಳ ಜೆಸಿಐಯಿಂದ ಮಾದರಿ ಕಾರ್ಯ : ಕಾರ್ತಿಕೇಯ ಮಧ್ಯಸ್ಥ ಮೆಚ್ಚುಗೆ

New Project (16)
Published on

ಬಂಟ್ವಾಳ: ಜೆಸಿಐ ಬಂಟ್ವಾಳ 2025ನೇ ಸಾಲಿನ ಅಧ್ಯಕ್ಷ ಗಣೇಶ್ ಕೆ.ಕುಲಾಲ್ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಬಿ.ಸಿ.ರೋಡಿನಲ್ಲಿ ನಡೆಯಿತು.

ನೂತನ ತಂಡವನ್ನು ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಜೆಸಿಐ ಭಾರತದ ಎಲ್ಲ ಘಟಕ ಮೌನವಹಿಸಿದ್ದಾಗ ವಲಯ 15 ಸದ್ದು ಮಾಡುತ್ತಿತ್ತು. ಈ ಸಂದರ್ಭ ವಲಯಕ್ಕೆ ಬೆನ್ನಲುಬಾಗಿ ನಿಂತು ಕಾರ್ಯಕ್ರಮ ಸಂಘಟಿಸಿದ ಕೀರ್ತಿ ಜೆಸಿಐ ಬಂಟ್ವಾಳಕ್ಕೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೋವಿಡ್ ಕಷ್ಟದ ಕಾಲದಲ್ಲೂ ವ್ಯವಹಾರ ಸಮ್ಮೇಳನ ನಿಶುಲ್ಕವಾಗಿ ಆಯೋಜಿಸಿದ ಹೆಗ್ಗಳಿಕೆ ಜೆಸಿಐ ಬಂಟ್ವಾಳಕ್ಕಿದೆ. ಇಂಥ ಘಟಕದ ಮೇಲೆ ಪ್ರೀತಿ ಅಭಿಮಾನವಿದ್ದು ಮುಂದಿನ ದಿನದಲ್ಲಿ ಅತ್ಯುತ್ತಮ ಕಾರ್ಯದ ಮೂಲಕ ಮಾದರಿ ಘಟಕವಾಗಿ ಹೊರಹೊಮ್ಮಲಿ ಎಂದು ಆಶಿಸಿದರು.

ನಿರ್ಗಮನ ಅಧ್ಯಕ್ಷೆ ರಶ್ಮಿ ಶೆಟ್ಟಿ ಅವರಿಂದ ಗಣೇಶ್ ಕೆ.ಕುಲಾಲ್ ಅಧಿಕಾರ ಸ್ವೀಕರಿಸಿದರು. ಬಳಿಕ ಆಶಯ ಭಾಷಣ ಮಾಡಿ ಮುಂದಿನ ವರ್ಷ ಕೆಲವೊಂದು ಯೋಜನೆ ಹಮ್ಮಿಕೊಳ್ಳಲಾಗಿದ್ದು ಸದಸ್ಯರು ಸಹಕಾರ ನೀಡುವಂತೆ ಕೋರಿದರು. ನಿರ್ಗಮನ ಕಾರ್ಯದರ್ಶಿ ಶ್ರೀನಿವಾಸ ಅರ್ಬಿಗುಡ್ಡೆ, ನಿರ್ಗಮನ ಕೋಶಾಧಿಕಾರಿ ಮನೋಜ್ ಕನಪಾಡಿ, ಲೇಡಿ ಜೇಸಿ ಸಂಯೋಜಕಿ ಆಶಾಮಣಿ ರೈ ಉಪಸ್ಥಿತರಿದ್ದರು.

ನಿರ್ಗಮನ ಅಧ್ಯಕ್ಷೆ ರಶ್ಮಿ ಶೆಟ್ಟಿ ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು. ಕಾರ್ಯದರ್ಶಿ ಕಿಶೋರ್ ಆಚಾರ್ಯ ವಂದಿಸಿದರು. ಸಂಗೀತ ರಸ ಮಂಜರಿ ನಡೆಯಿತು.

ಅಧಿಕಾರ ಸ್ವೀಕಾರ, ಸನ್ಮಾನ

ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಆಚಾರ್ಯ, ಕೋಶಾಧಿಕಾರಿಯಾಗಿ ಜೀವಿತಾ ಯತೀಶ್ ಕರ್ಕೇರಾ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ಅರ್ಬಿಗುಡ್ಡೆ, ಉಮೇಶ್ ಪೂಜಾರಿ, ಮನೋಜ್ ಕನಪಾಡಿ, ಕಿರಣ್ ಕುಮಾರ್, ವಚನ್ ಶೆಟ್ಟಿ, ವೆಂಕಟೇಶ್ ಕೃಷ್ಣಾಪುರ, ಲೇಡಿ ಜೇಸಿ ಸಂಯೋಜಕಿಯಾಗಿ ಬಬಿತಾ ಗಣೇಶ್ ಅಧಿಕಾರ ಸ್ವೀಕರಿಸಿದರು. 5 ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಲಾಯಿತು. ನಿಕಟಪೂರ್ವಾಧ್ಯಕ್ಷ ರಾಜೇಂದ್ರ ಕೆ., ಸಾಧಕ ಸದಸ್ಯರಾದ ಮನೋಜ್ ಕನಪಾಡಿ, ಸುರೇಶ್ ಕುಮಾರ್ ಬಿ. ನಾವೂರು, ಸಂದೀಪ್ ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು.

ಘಟಕ ರೈಸ್ ಅಪ್ ಆಗಬೇಕಾದರೆ ಎಲ್ಲರ ಸಹಕಾರ ಬೇಕು. ಮುಂದಿನ ವರ್ಷದಲ್ಲಿ ವಲಯದ ಅಭಿವೃದ್ಧಿಗೆ ಬಂಟ್ವಾಳ ಘಟಕದ ಸಹಕಾರಬೇಕು, ಬಂಟ್ವಾಳ ಘಟಕಕ್ಕೆ ಸಹಕಾರ ನೀಡಲು ಸದಾ ಬದ್ಧ. ಅಭಿಲಾಷ್ ಬಿ.ಎ., 2025ನೇ ಸಾಲಿನ ಚುನಾಯಿತ ವಲಯಾಧ್ಯಕ್ಷ ಜೆಸಿಐ ಸಂಸ್ಥೆ ಬಯಲು ವಿಶ್ವವಿದ್ಯಾಲಯವಿದ್ದಂತೆ. ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಾಗ ಮಾತ್ರ ಆ ಅನುಭವ ಪಡೆಯಲು ಸಾಧ್ಯವಿದೆ. ಸದಸ್ಯರು ಜವಾಬ್ದಾರಿ ಅರಿತುಕೊಂಡಾಗ ಸಂಘಟನೆಗೊಂದು ರೂಪ ಬರಲು ಸಾಧ್ಯ. ರಾಧಾಕೃಷ್ಣ ಬಂಟ್ವಾಳ, ಅಧ್ಯಕ್ಷ ಲಯನ್ಸ್ ಕ್ಲಬ್ ಬಂಟ್ವಾಳ https://www.vijayavani.net/brahmakalashotsava-invitation-released https://www.vijayavani.net/congratulatory-program-4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net