ಪದಾಧಿಕಾರಿಗಳ ಪದಗ್ರಹಣ

h6-sjmvs
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ ವತಿಯಿಂದ ರೋಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಬಿಬಿಎ ಕಾಲೇಜ್, ಇಂಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಪಿಯು ಕಾಲೇಜ್ ಮತ್ತು ರೋಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಡಿಗ್ರಿ ಕಾಲೇಜ್‌ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇಲ್ಲಿಯ ಜೆ.ಸಿ. ನಗರದ ಎಸ್.ಜೆ.ಎಂ.ವಿ.ಎಸ್ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಡಾ. ಮೂಜಗಂ ಸಭಾಭವನದಲ್ಲಿ ಏರ್ಪಾಟಾಗಿತ್ತು.

ಇಂಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಪಿಯು ಕಾಲೇಜ್ ಹುಬ್ಬಳ್ಳಿ 2024-25ನೇ ಸಾಲಿನ ಅಧ್ಯಕ್ಷರಾಗಿ ರಿಯಾ ಆರ್.ಕೆ.ಜೆ., ಕಾರ್ಯದರ್ಶಿಯಾಗಿ ಆಕಾಂಕ್ಷಾ ಜಾಧವ, ಮುಂದಿನ ಅಧ್ಯಕ್ಷರಾಗಿ ನಂದಿತಾ ವಿಂಜಮುರ ಆಯ್ಕೆಯಾಗಿದ್ದಾರೆ.

ರೋಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಬಿಬಿಎ ಕಾಲೇಜ್ ಹುಬ್ಬಳ್ಳಿ 2024-25ನೇ ಸಾಲಿನ ಅಧ್ಯಕ್ಷರಾಗಿ ಐಶ್ವರ್ಯಾ ಪಿ.ಟಿ., ಕಾರ್ಯದರ್ಶಿಯಾಗಿ ಅಶ್ವಿನಿ ಕಾಟವೆ, ಮುಂದಿನ ಅಧ್ಯಕ್ಷರಾಗಿ ಸೌಂದರ್ಯಾ ಬಡಿಗೇರ ಆಯ್ಕೆಯಾಗಿದ್ದಾರೆ.

ರೋಟರ‌್ಯಾಕ್ಟ್ ಕ್ಲಬ್ ಆಫ್ ಎಸ್.ಜೆ.ಎಂ.ವಿ.ಎಸ್ ಡಿಗ್ರಿ ಕಾಲೇಜ್ ಹುಬ್ಬಳ್ಳಿ 2024-25ನೇ ಸಾಲಿನ ಅಧ್ಯಕ್ಷರಾಗಿ ಸೌಂದರ್ಯಾ ನೂಲ್ವಿ, ಕಾರ್ಯದರ್ಶಿಯಾಗಿ ಲಕ್ಷ್ಮೀ ಪಿ., ಮುಂದಿನ ಅಧ್ಯಕ್ಷರಾಗಿ ತಲಪತಿ ಸಲೊಮೆ ಅನುಶಾ ಆಯ್ಕೆಯಾದರು.

ರೋಟರಿ ಕ್ಲಬ್ ಹುಬ್ಬಳ್ಳಿ ಮಾಜಿ ಅಧ್ಯಕ್ಷ ಡಾ.ಎನ್.ಎ. ಚರಂತಿಮಠ ಅವರು ಅಧಿಕಾರ ಹಸ್ತಾಂತರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.

ಕ್ಲಬ್ ಅಧ್ಯಕ್ಷ ಬಾಪು ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಮುಖ್ಯೋಪಾಧ್ಯಾಯಿನಿ ಡಾ. ಸಿಸಿಲಿಯಾ ಡಿ’ಕ್ರೂಸ್, ಸದಸ್ಯರಾದ ಶಿವಪುತ್ರ ಮುಕರ್ತಿಹಾಳ, ಈಶ್ವರ ಗುಳಗಣ್ಣವರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net