ನೂತನ ಧರ್ಮದರ್ಶಿಗಳ ನೇಮಕ

6 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಮಾಳಮಡ್ಡಿಯ ವನವಾಸಿ ಶ್ರೀರಾಮ ಮಂದಿರದ ಟ್ರಸ್ಟ್​ಗೆ ಹೊಸದಾಗಿ 6 ಜನ ಧರ್ಮದರ್ಶಿಗಳನ್ನು ಶುಕ್ರವಾರ ನೇಮಕ ಮಾಡಲಾಗಿದೆ.

ಟ್ರಸ್ಟ್​ನಲ್ಲಿ ಖಾಲಿ ಇದ್ದ 6 ಧರ್ಮದರ್ಶಿಗಳ ಸ್ಥಾನಕ್ಕೆ ಸತ್ಯಧ್ಯಾನ ಆಚಾರ್ಯ ಕಟ್ಟಿ, ಶ್ರೀನಿವಾಸ ಆಚಾರ್ಯ ಮಾನ್ವಿ, ವಾದಿರಾಜ ಆಚಾರ್ಯ ಮಠದ, ಡಾ. ಆರ್​ ವೈ. ಕಟ್ಟಿ, ರೋಹಿತ್​ ಪಾಟೀಲ್​ ಹಾಗೂ ಕೀರ್ತಿ ಕಂಕನವಾಡಿ ಅವರನ್ನು 5 ವರ್ಷಗಳ ಅವಧಿಗೆ ಟ್ರಸ್ಟ್​ ಅಧ್ಯಕ್ಷ ಆರ್​.ಪಿ. ಕುಲಕರ್ಣಿ ನೇಮಕ ಮಾಡಿದ್ದಾರೆ.

ನೂತನ ಧರ್ಮದರ್ಶಿಗಳಿಗೆ ಮಂದಿರದಲ್ಲಿ ಸನ್ಮಾನಿಸಲಾಯಿತು. ಟ್ರಸ್ಟ್​ ಉಪಾಧ್ಯಕ್ಷ ಹನುಮಂತ ಕೊಟಬಾಗಿ, ಧರ್ಮದರ್ಶಿಗಳಾದ ರವೀಂದ್ರ ದೇಶಪಾಂಡೆ, ಮುದ್ದು ವಿಠ್ಠಲ ಗಲಗಲಿ, ಸುಮಾ ರಾಯಚೂರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net