

ಎಂ.ಕೆ.ಹುಬ್ಬಳ್ಳಿ: ಜೊಲ್ಲೆ ಗ್ರೂಪ್ ಅಂಗ ಸಂಸ್ಥೆ ಯಕ್ಸಂಬಾದ ಶ್ರೀ ಜ್ಯೋತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಎಂ.ಕೆ.ಹುಬ್ಬಳ್ಳಿ ಶಾಖೆಯ ಸಲಹಾ ಸಮಿತಿಗೆ ನೂತನವಾಗಿ ಮೂವರು ಸದಸ್ಯರ ಸೇರ್ಪಡೆ ಕಾರ್ಯಕ್ರಮ ಶನಿವಾರ ಜರುಗಿತು.
ಜೊಲ್ಲೆ ಗ್ರೂಪ್ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ, ಸಹ ಸಂಸ್ಥಾಪಕಿ ಶಶಿಕಲಾ ಜೊಲ್ಲೆ ಅವರ ಸೂಚನೆ ಮೇರೆಗೆ ಮುಖ್ಯ ಕಚೇರಿ ದಿಗ್ದರ್ಶಕ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸಲಹಾ ಸಮಿತಿಗೆ ಶಿದ್ದಲಿಂಗಪ್ಪ ಈರಣ್ಣ ಮುತ್ನಾಳ, ಶಿವಾನಂದ ವಿಭೂತಿಮಠ ಹಾಗೂ ಪ್ರಶಾಂತ ಶಂಕರ ಪುಟ್ಟಿ ಅವರನ್ನು ನೇಮಕ ಮಾಡಿ ಆದೇಶ ಪ್ರತಿ ವಿತರಿಸಲಾಯಿತು.
ಸಹಕಾರಿ ಸಂಘದ ಶಾಖಾ ವ್ಯವಸ್ಥಾಪಕ ಪ್ರತಾಪ ಕರಗುಪ್ಪಿ, ಸಲಹಾ ಸಮಿತಿ ಸದಸ್ಯರಾದ ದೊಡ್ಡಪ್ಪ ಗಣಾಚಾರಿ, ರುದ್ರಪ್ಪ ಹುಚಗೌಡರ, ಶಿವಾನಂದ ಮಾವಿನಕೊಪ್ಪ, ಮಹಾಂತೇಶ ಗಾಣಿಗೇರ, ಸದಾನಂದ ಮೆಳವಂಕಿ, ಸಿಬ್ಬಂದಿ ದಯಾನಂದ ಬಡಿಗೇರ, ಮಹಾದೇವ ಗೋರ್ಡೆ, ರಾಜೇಶ್ವರಿ ಪಾಟೀಲ ಇತರರಿದ್ದರು.