ಎಸ್ಸಿ ಎಸ್ಟಿ ದೌರ್ಜನ್ಯ ಜಾಗೃತಿ ಸಮಿತಿಗೆ ಸದಸ್ಯರ ನೇಮಕ

ಮನೋಜ್‌ಕುಮಾರ್ ದಾನಪ್ಪ
ಮನೋಜ್‌ಕುಮಾರ್ ದಾನಪ್ಪ
Published on

ಕಂಪ್ಲಿ: ಅನುಸೂಚಿತ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ 1995ರ ಕಾಯ್ದೆ ಅನುಷ್ಟಾನ ಮತ್ತು ಕಾಯ್ದೆಯಡಿ ನೋಂದಣಿಯಾದ ಪ್ರಕರಣಗಳ ವಿಚಾರಣೆ, ದೌರ್ಜನ್ಯ ಪ್ರಕರಣಗಳಲ್ಲಿ ನೀಡಬೇಕಾದ ಪರಿಹಾರ, ಸಂತ್ರಸ್ಥರ ಪುನರ್ವಸತಿ ಕಾಯ್ದೆ ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಬಳ್ಳಾರಿ ಉಪ ವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಹೊಂದಿದೆ. ಈ ಸಮಿತಿಗೆ ಕಂಪ್ಲಿಯ ವಕೀಲ ಮನೋಜ್‌ಕುಮಾರ್ ದಾನಪ್ಪ, ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಚಿಕ್ಕಜಾಯಿಗನೂರಿನ ಜೆ.ಕಾಟಂರಾಜು ಅವರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಕ ಮಾಡಿ ಬಳ್ಳಾರಿ ಉಪವಿಭಾಗಾಧಿಕಾರಿಗಳು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net