ಕಸಾಪ ತಾಲೂಕು ಅಧ್ಯಕ್ಷರ ನೇಮಕ

New Project
Published on

ಧಾರವಾಡ: ಜಿಲ್ಲೆಯ 7 ತಾಲೂಕುಗಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ನಗರದ ಕಸಾಪ ಭವನದಲ್ಲಿ ನೇಮಕ ಮಾಡಿ ಭಾನುವಾರ ಆದೇಶ ಹೊರಡಿಸಲಾಯಿತು.

ಧಾರವಾಡ ತಾಲೂಕಿನ ಕಸಾಪ ಅಧ್ಯಕ್ಷರಾಗಿ ಮಹಾಂತೇಶ ನರೇಗಲ್, ಹುಬ್ಬಳ್ಳಿ ತಾಲೂಕು ನಗರ ಘಟಕದ ಅಧ್ಯಕ್ಷರಾಗಿ ವಿರೂಪಾಕ್ಷ ಕಟ್ಟಿಮನಿ, ಹುಬ್ಬಳ್ಳಿ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷರಾಗಿ ರಮೇಶ ಭರಮಗೌಡರ, ನವಲಗುಂದ ತಾಲೂಕಿನ ಅಧ್ಯಕ್ಷರಾಗಿ ಸಿದ್ದಯ್ಯ ಹಿರೇಮಠ, ಅಣ್ಣಿಗೇರಿ ತಾಲೂಕಿನ ಅಧ್ಯಕ್ಷರಾಗಿ ಲಲಿತಾ ಸಾಲಿಮಠ, ಅಳ್ನಾವರ ತಾಲೂಕು ಅಧ್ಯಕ್ಷರಾಗಿ ಗುರು ಸಬನೀಸ್, ಕಲಘಟಗಿ ಅಧ್ಯಕ್ಷರಾಗಿ ಈಶ್ವರ ಜವಳಿ ಅವರನ್ನು ಕೇಂದ್ರ ಪರಿಷತ್ ಅನುಮೋದನೆ ಮೇರೆಗೆ ನೇಮಕ ಮಾಡಿ ಆದೇಶಿಸಲಾಯಿತು.

ತಾಲೂಕು ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ನೇಮಕ ಮಾಡಿ ಕೇಂದ್ರ ಪರಿಷತ್ತಿನ ಅನುಮೋದನೆ ಪಡೆಯಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net