ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ನೇಮಕ

Appointment of Guarantee Schemes Implementation Authority
Published on

ಕುಶಾಲನಗರ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕೊಡಗು ಜಿಲ್ಲಾಧ್ಯಕ್ಷರಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ನೇಮಕವಾಗಿದ್ದಾರೆ. ಶಕ್ತಿ, ಗೃಹ ಜ್ಯೋತಿ, ಅನ್ನಭಾಗ್ಯ, ಗ್ರಹಲಕ್ಷಿö್ಮÃ, ಯುವ ನಿಧಿ ಯೋಜನೆಗಳು ಈಗಾಗಲೇ ಜಾರಿಗೊಂಡಿದ್ದು, ಈ ಗ್ಯಾರಂಟಿ ಯೋಜನೆಯ ಲಾಭಗಳನ್ನು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಸಾಂಖ್ಯಿಕ ಕಾರ್ಯವಿಧಾನಗಳನ್ನು ಜಾರಿಗೆ ತರಲು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರಕ್ಕೆ ಅಧ್ಯಕ್ಷರು, ಉಪಾಧ್ಯಕ್ಷರು, ಸಹ ಸದಸ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಾರ್ಯದರ್ಶಿ ಡಾ. ಪ್ರಕಾಶ್ ಜಿ.ಸಿ. ಆದೇಶ ಮಾಡಿದ್ದಾರೆ.

ಸಂಜಯ ಜೀವಿಜಯ, ಶಾರಿ ಗಿರೀಶ, ಭೀಮಯ್ಯ ಕೆ.ಸಿ., ನಸೀರ್ ಸಿ.ಎ. ಹಾಗೂ ಪಂಕಜ ಉಪಾಧ್ಯಕ್ಷರಾಗಿ ನೇಮಕವಾಗಿದ್ದಾರೆ. ಕೃಷ್ಣ ಕುಟ್ಟಂಡ, ಅಣ್ಣಯ್ಯ, ಅಬ್ದುಲ್ ರಹೀಮಾನ್, ಸಂದರ್, ಬಶೀರ್ ಕೆ.ಎಂ., ಮುಸ್ತಾಫ ನೆಲ್ಲಿಹುದಿಕೇರಿ, ಹರಿಪ್ರಸಾದ್, ಪಿ.ಎಲ್. ಸುರೇಶ್, ಧನ್ಯ, ಕೆ.ಜಿ. ಪೀಟರ್, ವಿ.ಪಿ. ಶಶಿಧರ್, ಕಾಂತರಾಜ್, ಎಂ.ಜಿ. ಮೋಹನ್‌ದಾಸ್, ಜಾನ್ಸನ್, ಪ್ರಶಾಂತ್ ಕೆ.ಎ. ಸದಸ್ಯರಾಗಿ ನೇಮಕವಾಗಿದ್ದು, ಅಪರ ಜಿಲ್ಲಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net