ಬಿಡಿಎಗೆ ನಾಲ್ವರು ಸದಸ್ಯರ ನೇಮಕ: ರಾಜ್ಯ ಸರ್ಕಾರದಿಂದ ಆದೇಶ

bda office
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನಾಲ್ವರು ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಹೊಸದಾಗಿ ನಾಲ್ವರು ಸೇರ್ಪಡೆಯಾಗಿದ್ದು, ಒಟ್ಟು ಸದಸ್ಯರ ಸಂಖ್ಯೆ 6ಕ್ಕೆ ಏರಿದೆ. ವಾಸ್ತುಶಿಲ್ಪ ಕ್ಷೇತ್ರದಿಂದ ವಿ.ಆರ್.ಸುಜಯ್, ಮಹಿಳಾ ಕ್ಷೇತ್ರದಡಿ ಮಂಜುಳಾ ನಾಯ್ಡು, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪಿ.ಗಾಂಧಿ ಹಾಗೂ ಸಾಮಾನ್ಯ ಕ್ಷೇತ್ರದಿಂದ ಬಿ.ಎನ್.ಅಮರನಾಥ್ ಅವರನ್ನು ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net