

ಬೈಂದೂರು : ಮಂಗಳೂರಿನಲ್ಲಿ ಇತ್ತೀಚೆಗೆ ನೂತನವಾಗಿ ಗುರುದೀಕ್ಷೆ ಸ್ವೀಕರಿಸಿದ ಜೆಸ್ವಿತ್ ಸಮೂಹ ಕರ್ನಾಟಕ ಪ್ರಾಂತ್ಯದ ಧರ್ಮಗುರು ಜೋಸ್ವಿನ್ ಪೀರೆರಾ ಬೈಂದೂರಿನ ಹೋಲಿಕ್ರಾಸ್ ಚರ್ಚ್ ಸಹಾಯಕ ಧರ್ಮಗುರುಗಳಾಗಿ ನೇಮಕಗೊಂಡಿದ್ದಾರೆ. ಮೂಲತಃ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದವರಾದ ಅವರು ಮುಂದಿನ ಮೇ ತಿಂಗಳ ತನಕ ಬೈಂದೂರಿನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.