

ಮೈಸೂರು: ನಗರಪಾಲಿಕೆ ಆಡಳಿತಾಧಿಕಾರಿಯಾಗಿ ಪ್ರಾದೇಶಿಕ ಆಯುಕ್ತ ಡಾ.ಜೆ.ಸಿ.ಪ್ರಕಾಶ್ ಸೋಮವಾರ ಅಧಿಕಾರ ಸ್ವೀಕರಿಸಿದರು.
ನಗರಪಾಲಿಕೆ ಕಚೇರಿಯಲ್ಲಿನ ಮೇಯರ್ ಕೊಠಡಿಗೆ ಆಗಮಿಸಿದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಅವರನ್ನು ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಹೂಗುಚ್ಛ ನೀಡಿ ಬರಮಾಡಿಕೊಂಡರು. ನಂತರ ನಗರಪಾಲಿಕೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಈ ವೇಳೆ ಹೆಚ್ಚುವರಿ ಆಯುಕ್ತೆ ಎಂ.ರೂಪಾ, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ಅಪರ ಆಯುಕ್ತ ಸೋಮಶೇಖರ್ ಇತರರಿದ್ದರು.
ನಗರಪಾಲಿಕೆ ಸದಸ್ಯರ ಐದು ವರ್ಷಗಳ ಅವಧಿ ನ.16ರಂದು ಮುಗಿದ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಉಪ ಮೇಯರ್ ಆಡಳಿತವು ಅಂತ್ಯವಾಗಿತ್ತು. ಇದೀಗ ಸರ್ಕಾರ ಚುನಾವಣೆ ನಡೆಸಿ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಮೇಯರ್ ಆಯ್ಕೆಯಾಗುವ ತನಕ ಆಡಳಿತಾಧಿಕಾರಿಗಳೇ ಕಾರ್ಯಭಾರ ನಡೆಸಲಿದ್ದಾರೆ.