ಅಧಿಕಾರೇತರ ಸದಸ್ಯರನ್ನಾಗಿ ನೇಮಕ

1
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ಮಾತನಾಡಿದರು
Published on

ಹೊಳೆನರಸೀಪುರ: ತಾಲೂಕು ಮಟ್ಟದ ಕೆಡಿಪಿ ತ್ರೈಮಾಸಿಕ ಪರಿಶೀಲನಾ ಸಮಿತಿಯ ಅಧಿಕಾರೇತರ ಸದಸ್ಯರನ್ನಾಗಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಡವಿನ ಕೋಟೆ ಗ್ರಾಮದ ಕೆ.ಕೆ.ಲೋಕೇಶ್, ಸೂರನಹಳ್ಳಿ ಗ್ರಾಮದ ಸುರೇಶ್, ಚಿಟ್ಟನಹಳ್ಳಿ ಗ್ರಾಮದ ರವಿಕುಮಾರ್, ಭೀಮನಹಳ್ಳಿ ಗ್ರಾಮದ ವಕೀಲ ಪ್ರಸಾದ್, ದೊಡ್ಡಬ್ಯಾಗತಹಳ್ಳಿ ಗ್ರಾಮದ ಮಹಮ್ಮದ್ ರಿಯಾಜ್, ಪಟ್ಟಣ ನಿವಾಸಿ ವಿ.ಟಿ.ಪದ್ಮಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ್ ತಿಳಿಸಿದರು.

ಸಂಸದ ಶ್ರೇಯಸ್ ಎಂ.ಪಟೇಲ್ ಅವರ ಶಿಫಾರಸಿನ ಮೇರೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಐತಿಹಾಸಿಕ 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮತ್ತು ತರುತ್ತಿರುವ ಅದ್ಭುತ ಯೋಜನೆಗಳ ಮಹತ್ವ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಸದಸ್ಯರಾದ ಕೆ.ಕೆ.ಲೋಕೇಶ್, ಸುರೇಶ್, ಮೊಹಮ್ಮದ್ ರಿಯಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net