

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ಪಂಚಾಯಿತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ತ್ರೆÊಮಾಸಿಕ ಪರಿಶೀಲನಾ ಕೆಡಿಪಿ ಸಮಿತಿಗೆ ಐವರನ್ನು ಅಽಕಾರೇತರ ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಸರ್ಕಾರ ಆದೇಶಿಸಿದೆ.
ಸಾಮಾನ್ಯ ವರ್ಗದಡಿ ಹಳೇತೇಗೂರ ಗ್ರಾಮದ ಯಲ್ಲಪ್ಪ ಗುಡದರಿ, ಪರಿಶಿಷ್ಟ ಪಂಗಡದಲ್ಲಿ ಹುಬ್ಬಳ್ಳಿ ತಾಲೂಕು ಗಂಗಿವಾಳದ ನಾಗರಾಜ ಹೆಗ್ಗಣ್ಣವರ, ಹಿಂದುಳಿದ ವರ್ಗದಲ್ಲಿ ನವಲಗುಂದ ತಾಲೂಕು ಚಿಲಕವಾಡದ ಆರ್.ಎಚ್. ಕೋನರಡ್ಡಿ, ಅಲ್ಪಸಂಖ್ಯಾತ ಕೋಟಾದಲ್ಲಿ ಹುಬ್ಬಳ್ಳಿಯ ಸಲೀಂ ಸುಂಡಕೆ, ಮಹಿಳಾ ಕೋಟಾದಲ್ಲಿ ಕಲಘಟಗಿ ತಾಲೂಕು ಗಂಭ್ಯಾಪುರದ ಲಲಿತಾ ಗುರುಸಿದ್ದೇಶ ಬೆಂಗೇರಿ ಅವರನ್ನು ನಾಮನಿರ್ದೆಶನ ಮಾಡಲಾಗಿದೆ.