

ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದ ಆರಾಧ್ಯ ದೇವತೆ ಶ್ರೀಕ್ಷೇತ್ರ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರಕ್ಕೆ ನಾಮನಿರ್ದೇಶಿತ ಸದಸ್ಯರನ್ನಾಗಿ ಹುಬ್ಬಳ್ಳಿ ಉಣಕಲ್ಲನ ರೇಣುಕಾ ಕಲ್ಲಪ್ಪ ವಾಲಿಕಾರ ಅವರನ್ನು ನೇಮಕಗೊಳಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ರೇಣುಕಾ ವಾಲಿಕಾರ ಅವರ ಪತಿ ಕಲ್ಲಪ್ಪ ವಾಲಿಕಾರ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಪತಿಯೊಂದಿಗೆ ರೇಣುಕಾ ಅವರು ಸಹ ಸಮಾಜ ಸೇವೆಯಲ್ಲಿ ಛಾಪು ಮೂಡಿಸಿದ್ದಾರೆ.