

ಯಲ್ಲಾಪುರ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಎನ್. ಗಾಂವ್ಕರ ಪಟ್ಟಿ ಪ್ರಕಟಿಸಿದ್ದಾರೆ.
ಸಮಿತಿಯ ಉಪಾಧ್ಯಕ್ಷರಾಗಿ ಅನಿಲ ನಾಯ್ಕ ಇಡಗುಂದಿ, ಮುಸ್ತಾಕ ಶೇಖ್ ಕಿರವತ್ತಿ, ರತ್ನಾಕರ ಹೆಗಡೆ ಹಿತ್ಲಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಎನ್.ಎನ್. ಹೆಬ್ಬಾರ್, ಅನಿಲ ಮರಾಠೆ, ಮಂಗಲಾ ಕುಣಬಿ, ಖಜಾಂಚಿಯಾಗಿ ಎಂ.ಕೆ. ಭಟ್ಟ ಕುಂದೂರು, ಸಹಕಾರ್ಯದರ್ಶಿಗಳಾಗಿ ವೆಂಕಟ್ರಮಣ ಭಾಗ್ವತ ಆನಗೋಡ, ಅಶೋಕ ಶೆಟ್ಟಿ, ನಾಗೇಂದ್ರ ಪೂಜಾರಿ ಅವರನ್ನು ನೇಮಕ ಮಾಡಲಾಗಿದೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನರಸಿಂಹ ಭಟ್ಟ ನಂದೊಳ್ಳಿ, ಸರಿತಾ ಆಚಾರಿ, ಚಂದ್ರಕಾಂತ ಮರಾಠಿ, ಸುಪ್ರಿಯಾ ಸಿದ್ದಿ, ಅನಂತ ಗೌಡ, ವಿನಾಯಕ ಅರೆಗುಳಿ, ಗೀತಾ ಸಿಂಧೆ, ಮಹೇಶ ಗಾಂವ್ಕರ ವಜ್ರಳ್ಳಿ, ಜೈನಬಿ ಕುಂಜಿ, ಗೀತಾ ಕಲಬುರ್ಗಿ, ಗಣೇಶ ರೋಖಡೆ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.