ಲೆಫ್ಟಿನೆಂಟ್ ಹುದ್ದೆಗೆ ಸಾತ್ವಿಕ್ ನೇಮಕ : ಆಳ್ವಾಸ್‌ನ ಹಳೇ ವಿದ್ಯಾರ್ಥಿ

leftinant
ಸಾತ್ವಿಕ್ ರೈ.
Published on

ಕಾಸರಗೋಡು: ನಗರದ ನಿವಾಸಿ ಸಾತ್ವಿಕ್ ಎಸ್ ರೈ ಭಾರತೀಯ ಭೂ ಸೇನೆಯ ಲೆಫ್ಟಿನೆಂಟ್ ಆಗಿ ನೇರ ನೇಮಕಾತಿ ಮೂಲಕ ಆಯ್ಕೆಯಾಗಿದ್ದಾರೆ. ಬಿಹಾರ ಗಯಾದ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ 5 ವರ್ಷ ತರಬೇತಿ ಬಳಿಕ ಭೂ ಸೇನೆಯ ಮುಖ್ಯಸ್ಥ ಲೆ. ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಭೂ ಸೇನೆಯ ಈ ಪ್ರಮುಖ ಹುದ್ದೆಯನ್ನು ಸ್ವೀಕರಿಸಿದ್ದಾರೆ.

ಲೆಫ್ಟಿನೆಂಟ್ ಸಾತ್ವಿಕ್ ರೈ ಕಾಸರಗೋಡು ಚೈತನ್ಯ ವಿದ್ಯಾಲಯ, ಚಿನ್ಮಯ ವಿದ್ಯಾಲಯ ಮತ್ತು ಮೂಡಬಿದಿರೆ ಆಳ್ವಾಸ್ ಕಾಲೇಜಿನ ಹಳೇ ವಿದ್ಯಾರ್ಥಿಯಾಗಿದ್ದಾರೆ. ಪದವಿ ಶಿಕ್ಷಣದ ನಂತರ ಬಿಹಾರ ಗಯಾದ ಮಿಲಿಟರಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ ಸೇರ್ಪಡೆಗೊಂಡಿದ್ದು, ಮಿಲಿಟರಿ ತರಬೇತಿ ಜತೆಗೆ ಎಲೆಕ್ಟ್ರಾನಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪೂರೈಸಿದ್ದಾರೆ.

ಪಾಲಕ ಹಿರಿಯ ವಕೀಲ ಹಾಗೂ ಜಿಲ್ಲಾ ಬಂಟರ ಸಂಘದ ಮಾಜಿ ಅಧ್ಯಕ್ಷ ಸದಾನಂದ ರೈ, ಚಿನ್ಮಯ ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಶರಣ್ಯ ಎಸ್ ರೈ, ಸಹೋದರ ರಿತ್ವಿಕ್ ರೈ ಪದವಿ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಾಸರಗೋಡಿಗೆ ಆಗಮಿಸಿದ ಸಾತ್ವಿಕ್ ಎಸ್ ರೈ ಅವರನ್ನು ವಿವಿಧ ಸಂಘ ಸಂಸ್ಥೆಗಳು, ಅಭಿಮಾನಿ ಬಳಗದ ವತಿಯಿಂದ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net