ಎನ್‌ಸಿಟಿಎಸ್‌ನ ರಾಜ್ಯ ಜಂಟಿ ನಿರ್ದೇಶಕರಾಗಿ ನೇಮಕ

22 Dwd 8 Raviprasad K.
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ಗಣಿತ ಶಿಕ್ಷಕ ರವಿಪ್ರಸಾದ ಕೆ. ಅವರನ್ನು ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ್ (ಎನ್‌ಸಿಟಿಎಸ್)ನ ರಾಜ್ಯ ಘಟಕದ ಜಂಟಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಎನ್‌ಸಿಟಿಎಸ್ ಭಾರತದ ವಿಜ್ಞಾನ ಕ್ಷೇತ್ರದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ರಾಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಘಟಕವಾಗಿದೆ ಎಂದು ಎನ್‌ಸಿಟಿಎಸ್‌ನ ದಕ್ಷಿಣ ಭಾರತದ ನಿರ್ದೇಶಕ ಎಸ್.ವಿ. ಬುರ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net