ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ವಸಂತ್​ ಕಿಣಿ

udp-24-dsic
Published on

ಉಡುಪಿ: ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 33ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ಹರೀಶ್​ ಕುಂದರ್​ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್​ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು. ಸಂಘದ ಸ್ಥಾಪಕ ಅಧ್ಯಕ್ಷ ವಿನ್ಸೆಂಟ್​ ಪಿಂಟೋ ಅವರನ್ನು ಸನ್ಮಾನಿಸಲಾಯಿತು. ಮಾಜಿ ಅಧ್ಯಕ್ಷರಾದ ಕೆ. ಪ್ರಶಾಂತ್​ ಬಾಳಿಗಾ, ಎಂ. ವಿಶ್ವನಾಥ ಭಟ್​ , ಜಾನ್​ ಡಿ ಸಿಲ್ವಾ ಹಾಗೂ ಎಂ. ಚಿತ್ತರಂಜನ್​ ಭಟ್​ ಶುಭಾಂಶನೆಗೈದರು. ಸಂಘದ ಮಾಜಿ ಅಧ್ಯಕ್ಷ ಎಂ. ಗಣೇಶ್​ ಕಿಣಿ ಹಾಗೂ ಸದಸ್ಯ ಎಂ. ವಾಮನ್​ ಭಟ್​ ಕಾರ್ಯಕ್ರಮ ನಿರ್ವಹಿಸಿದರು.

ನೂತನ ಪದಾಧಿಕಾರಿಗಳ ಆಯ್ಕೆ

ಉದ್ಯಮಿ ಎಂ. ವಸಂತ್​ ಕಿಣಿ 2025-26 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಎಂ. ವಲ್ಲಭ್​ ಭಟ್​, ಹೃಷಿಕೇಶ್​ ಹೆಗ್ಡೆ, ಹಾಗೂ ಕೃಷ್ಣಪ್ರಸಾದ್​ ಶೆಟ್ಟಿ , ಕಾರ್ಯದರ್ಶಿಯಾಗಿ ಕೆ.ರಂಜನ್​ ಕಲ್ಕೂರ , ಕೋಶಾಧಿಕಾರಿಯಾಗಿ ಆನಂದ್​ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕೆ. ಮಹೇಶ್​ ಉಡುಪ, ಸಮೀರ್​ ಮೊಹಮ್ಮದ್​ ಹಾಗೂ ಸುರೇಂದ್ರ ನಾಯಕ್​ ಅವಿರೋಧವಾಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net