ಗುತ್ತಲ ಪಟ್ಟಣ ಪಂಚಾಯಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕ

Guttala Pattana Panchayt
Published on

ಗುತ್ತಲ: ಸ್ಥಳೀಯ ಪಟ್ಟಣ ಪಂಚಾಯಿತಿಗೆ ಪಟ್ಟಣದ ನಿಂಗರಾಜ ಬದ್ದೆಪ್ಪ ನಾಯಕ, ಪಿ.ಎನ್. ಹೇಮಗಿರಿಮಠ ಹಾಗೂ ಚನ್ನಪ್ಪ ಕಲಾಲ ಅವರನ್ನು ರಾಜ್ಯ ಸರ್ಕಾರ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಿ ಆದೇಶಿಸಿದೆ. ವಿಧಾನ ಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಶಿಫಾರಸಿನನ್ವಯ ಸರ್ಕಾರ ನೇಮಕ ಮಾಡಿದ್ದು, ರಾಜ್ಯಪಾಲರ ಆಜ್ಞಾನುಸಾರ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ನಾಮನಿರ್ದೇಶಿತರನ್ನಾಗಿ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net