ಕೆದಮುಳ್ಳುರು ಗ್ರಾ.ಪಂಗೆ ಖಾಯಂ ಸಿಬ್ಬಂದಿಗಳನ್ನ ನೇಮಿಸಿ

M M parameshwar
Published on

ಮಡಿಕೇರಿ: ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಖಾಯಂ ಸಿಬ್ಬಂದಿಗಳನ್ನು ನೇಮಿಸದಿದ್ದಲ್ಲಿ ಪಂಚಾಯಿತಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೆದಮುಳ್ಳೂರು ಗ್ರಾ.ಪಂ ಸದಸ್ಯ ಎಂ.ಎಂ.ಪರಮೇಶ್ವರ್ ಎಚ್ಚರಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಂಗಾಮಿ ಕಾರ್ಯದರ್ಶಿಯಾಗಿ ಪಿ.ಎಸ್.ಸತೀಶ್ ಎಂಬುವವರನ್ನು ನೇಮಿಸಲಾಗಿತ್ತು. ಇವರು ವಾರದಲ್ಲಿ ಮೂರು ದಿನದಂತೆ ಗ್ರಾ.ಪಂ ಕಚೇರಿಗೆ ಆಗಮಿಸಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ, ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಈ ಹಿನ್ನೆಲೆ ಕಚೇರಿ ಕೆಲಸಗಳು ವಿಳಂಬವಾಗುವುದರ ಜತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಪಿಡಿಒ, ಕಾರ್ಯದರ್ಶಿ ಹಾಗೂ ಕರವಸೂಲಿಗಾರರನ್ನು ನೇಮಕ ಮಾಡದಿದ್ದಲ್ಲಿ ಕೆದಮುಳ್ಳುರು ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಸುದ್ದಿಗೋಷ್ಠಿಯಲ್ಲಿ ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷೆ ಶೀಲಾ ಮೇದಪ್ಪ, ಉಪಾಧ್ಯಕ್ಷೆ ಎಂ.ಬಿ.ಮೀನಾಕ್ಷಿ, ಸದಸ್ಯರಾದ ಎಂ.ಜೆ.ಮುತ್ತಪ್ಪ, ಪಿ.ಜೆ.ಜಯಂತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net