ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಮನವಿ

mkg1
Published on

ಮಲೆಬೆನ್ನೂರು: ಪಟ್ಟಣದ ಅಂಚೆ ಕಚೇರಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಿ ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್ ಹಾಗೂ ಗ್ರಾಮಸ್ಥರು ಅಂಚೆ ಕಚೇರಿ ಪಾಲಕ ಶ್ರೀಕಾಂತ್ ದಿಡಗೂರು ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಬೆಣ್ಣೆಹಳ್ಳಿ ಸಿದ್ದೇಶ್, ಪಟ್ಟಣದಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ದಿನನಿತ್ಯ ಅಂಚೆ ಕಚೇರಿ ಸವಲತ್ತುಗಳನ್ನು ಪಡೆಯಲು ಸಾರ್ವಜನಿಕರು ಆಗಮಿಸುತ್ತಾರೆ. ಆದರೆ, ಕಚೇರಿಯಲ್ಲಿ ಕೇವಲ ಇಬ್ಬರು ಮಾತ್ರ ಕಾರ್ಯನಿರ್ವಹಿಸುವುದರಿಂದ ಸರಿಯಾದ ಸಮಯಕ್ಕೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ದೂರಿದರು.

ಇದರಿಂದ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಸೇರಿ ಹಣ ಪಡೆಯಲು ಅಥವಾ ಖಾತೆ ತೆರೆಯಲು ವಾರಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚುವರಿಯಾಗಿ ಇಬ್ಬರು ಸಿಬ್ಬಂದಿ ಅವಶ್ಯಕತೆ ಇದ್ದು, ಸ್ಥಳೀಯವಾಗಿ ಇಬ್ಬರನ್ನು ತೆಗೆದುಕೊಂಡರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.

ಕೆ.ಜಿ. ಲೋಕೇಶ್, ಹರಿಹರದ ಕರಿಬಸಪ್ಪ, ಕೆ.ಜಿ. ಪರಮೇಶಪ್ಪ, ಯು.ಸಿದ್ದೇಶ್, ಉಳ್ಳಳ್ಳಿ ಕುಮಾರ, ವೈ. ವಸಂತಪ್ಪ, ಜಿ.ವಿ. ಹರೀಶ್, ಕನ್ನಾಳ ಬಸಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net